ಬೆಂಗಳೂರು, ಫೆಬ್ರವರಿ 07, 2020 (www.justkannada.in): ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಇದು ಅವರ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುತ್ತದೆ.
ಈ ಮೂಲಕ ಕೊಹ್ಲಿಯ ಬ್ರಾಂಡ್ ಮೌಲ್ಯವು ಗಗನಕ್ಕೇರುತ್ತಿದೆ. ಜಾಗತಿಕ ಸಲಹಾ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಕೊಹ್ಲಿಯ ಬ್ರಾಂಡ್ ಮೌಲ್ಯವು 2019 ರಲ್ಲಿ ಶೇ 39 ರಷ್ಟು ಹೆಚ್ಚಳವಾಗಿದ್ದು, 237.5 ಮಿಲಿಯನ್ಗೆ ಏರಿದೆ. ಈ ಅಧ್ಯಯನವು ಭಾರತೀಯ ಪ್ರಸಿದ್ಧ ಸೆಲೆಬ್ರಿಟಿ ಬ್ರ್ಯಾಂಡ್‌ಗಳ ಸೆಲಬ್ರಿಟಿಯಾಗಿದ್ದಾರೆ.
ಆಯಾ ಕಂಪನಿಗಳ ಜೊತೆ ಒಪ್ಪಂದ ಪ್ರಕಾರ ಲೆಕ್ಕಹಾಕಿದ ಬ್ರಾಂಡ್ ಮೌಲ್ಯಗಳ ಆಧಾರದ ಮೇಲೆ ಈ ಸ್ಥಾನಗಳನ್ನು ಕೊಡಲಾಗಿದೆ. ಪ್ರಸಕ್ತ ಮೂರು ವರ್ಷದಲ್ಲಿ ಕೊಹ್ಲಿ ತಮ್ಮ ಉನ್ನತ ಸ್ಥಾನವನ್ನು ಕಾಯ್ದುಕೊಂಡು ಹೋಗುತ್ತಿದ್ದು, ಬಾಲಿವುಡ್ ನಟ, ನಟಿಯರಾದ ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾರುಖ್ ಖಾನ್ ಅವರಿಗಿಂತ ಉತ್ತಮ ಬ್ರಾಂಡ್ ಮೌಲ್ಯವನ್ನು ಹೊಂದಿದ್ದಾರೆ.
2019 ವರ್ಷವು ಕೊಹ್ಲಿಗೆ ಉತ್ತಮವಾಗಿದ್ದು, 2,455 ರನ್ಗಳನ್ನು ಗಳಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರಮಖ ರನ್ ಮಷಿನ್ ಆಗಿ ಹೊರಹೊಮ್ಮಿದ್ದಾರೆ.