ಹಾಸನ,ಮೇ,24,2019(www.justkannada.in): ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಸೋಲಾದ ಹಿನ್ನೆಲೆ, ತಾನು ಗೆದ್ದಿರುವ ಹಾಸನ ಕ್ಷೇತ್ರವನ್ನ ತಮ್ಮ ತಾತ ದೇವೇಗೌಡರಿಗೆ ಬಿಟ್ಟು ಕೊಡಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿ ಸ್ಪಷ್ಟನೆ ನೀಡಿರುವ ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರವನ್ನ ದೇವೇಗೌಡರಿಗೆ ಬಿಟ್ಟು ಕೊಡುತ್ತೇನೆ. ಹೀಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ನಿರ್ಧರಿಸಿದ್ದೇನೆ. ನಾನು ಪ್ರೀತಿಯಿಂದ ಹೇಳುತ್ತಿದ್ದೇನೆ. ಅವರು ಸ್ವೀಕರಿಸಬೇಕು. ದೇವೇಗೌಡರನ್ನ ಇಲ್ಲಿಂದ ಗೆಲ್ಲಿಸಿ ವಿಜಯೋತ್ಸವ ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ.
ನಿನ್ನೆ ಲೋಕಸಭಾ ಚುನಾವಣೆ ಹೊರಬಿದ್ದಿದ್ದು ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳಿಸಿದರೇ ಜೆಡಿಎಸ್ ಮತ್ತು ಕಾಂಗ್ರೆಸ ತಲಾ ಒಂದೊಂದು ಸ್ಥಾನ ಮಾತ್ರ ಗೆದ್ದಿವೆ. ಅದರಲ್ಲೂ ಘಟನಾನುಘಟಿ ನಾಯಕರಾದ ಹೆಚ್.ಡಿ ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಕೆಎಚ್ ಮುನಿಯಪ್ಪ ಸೋಲನ್ನಪ್ಪಿದ್ದಾರೆ.
Key words: Decision to give Deve Gowda the seat of Hassan: ready to resign –prajwal revanna
#Election2019 #prajwalrevanna #hddevegowda #hassan