ಬೆಂಗಳೂರು, ಫೆಬ್ರವರಿ 08, 2020 (www.justkannada.in): ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು 15 ದಿನಗಳ ರಜೆಯನ್ನು ಮುಂದುವರೆಸಿ ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯಿಸಿದೆ.
ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ 2019ರ ಪೂರ್ವದಲ್ಲಿ 15 ದಿನಗಳ ಸಾಂದರ್ಭಿಕ ರಜೆಗಳಿದ್ದವು, ನಂತರದಲ್ಲಿ 2019ರ ಜೂ.13ರಂದು 4ನೇ ಶನಿವಾರ ಸಾರ್ವತ್ರಿಕ ರಜೆ ಎಂದು ಘೋಷಿಸಿ, ಈ ಹಿಂದೆ ನಿಗದಿಪಡಿಸಿದ್ದ 15ದಿನಗಳ ರಜೆಯನ್ನು 10 ದಿನಕ್ಕೆ ಇಳಿಸಿ ಆದೇಶ ಹೊರಡಿಸಲಾಗಿತ್ತು.
4ನೇ ಶನಿವಾರವನ್ನು ಬಳಸಿಕೊಳ್ಳದ ಶಿಕ್ಷಣ, ಆರೋಗ್ಯ, ಪೊಲೀಸ್ ಇತರೆ ಇಲಾಖೆಗಳ ಕೆಲವು ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ನೌಕರರ ಸಂಘವು ಮನವಿ ಸಲ್ಲಿಸಲಾಗಿತ್ತು.
ಮನವಿ ಸ್ವೀಕರಿಸಿದ ಸರ್ಕಾರವು ಈ ಹಿಂದೆ ಇರುವ 15 ದಿನಗಳ ಸಾಂಧರ್ಭಿಕ ರಜೆಯನ್ನು ಆಯ್ದ ಇಲಾಖೆಗಳು ಮುಂದುವರೆಸಲು ಆದೇಶ ಹೊರಡಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.