ಆಕ್ಲೆಂಡ್, ಫೆಬ್ರವರಿ 08, 2020 (www.justkannada.in): 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 274 ರನ್ ಗಳ ಸವಾಲಿನ ಗುರಿಯನ್ನು ಭಾರತಕ್ಕೆ ನೀಡಿದೆ.
ಆಕ್ಲೆಂಡ್ ನ ಈಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಮಾರ್ಟಿನ್ ಗಪ್ಟಿಲ್ (79 ರನ್), ಹೆನ್ರಿ ನಿಕೋಲಸ್ (41 ರನ್) ಮತ್ತು ರಾಸ್ ಟೇಲರ್ (ಅಜೇಯ 73 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದಾಗಿ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 273 ರನ್ ಪೇರಿಸಿತು. ಆ ಮೂಲಕ ಭಾರತಕ್ಕೆ ಗೆಲ್ಲಲು 274 ರನ್ ಗಳ ಸವಾಲಿನ ಗುರಿ ನೀಡಿದೆ.
ನ್ಯೂಜಿಲೆಂಡ್ ತಂಡ ಅತ್ಯುತ್ತಮ ಆರಂಭ ಪಡೆದಿತ್ತಾದರೂ, ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದ ಕಿವೀಸ್ ಪಡೆಯ ರನ್ ವೇಗಕ್ಕೆ ಕಡಿವಾಣ ಬಿತ್ತು. ಆದರೆ ಅಂತಿಮ ಹಂತದಲ್ಲಿ 9ನೇ ವಿಕೆಟ್ ನಲ್ಲಿ ರಾಸ್ ಟೇಲರ್ ಮತ್ತು ಜೇಮಿಸನ್ ಜೋಡಿ ಮುರಿಯದ 76ರನ್ ಗಳ ದಾಖಲೆಯ ಜೊತೆಯಾಟವಾಡಿ ನ್ಯೂಜಿಲೆಂಡ್ ತಂಡ 250ರ ಗಡಿ ದಾಟುವಂತೆ ಮಾಡಿತು.
ಇನ್ನು ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ನವದೀಪ್ ಸೈನಿ 2 ಮತ್ತು ಚಹಲ್ 1 ವಿಕೆಟ್ ಪಡೆದರು.