ಮೈಸೂರು,ಫೆ,12,2020(www.justkannada.in): ಅವಧಿ ಮುಗಿದ ತಿಂಡಿ ಪದರ್ಥಗಳನ್ನ ಮಾರಾಟ ಮಾಡುತ್ತಿದ್ದ ಬೇಕರಿ ಮಾಲೀಕನಿಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು 20 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಆರೋಮ ಬೇಕರಿಗೆ ಮೈಸೂರು ಪಾಲಿಕೆ ಅಧಿಕಾರಿಗಳು ದಂಡ ಹಾಕಿದ್ದಾರೆ. ಅವಧಿ ಮುಗಿದಿದ್ದ ಬಿಸ್ಕೆಟ್, ಫಂಗಸ್ ಬಂದಿರುವ ಬ್ರೇಡ್ ಡಬ್ಬಿಯಲ್ಲಿ ಇಟ್ಟಿದ್ದ ಸಿಹಿ ತಿನಿಸುಗಳನ್ನ ಬೇಕರಿ ಸಿಬ್ಬಂದಿ ಮಾರಟ ಮಾಡುತ್ತಿದ್ದರು.
ಈ ಸಂಬಂಧ ಸಾರ್ವಜನಿಕರೊಬ್ಬರ ದೂರಿನ್ವಯ ದಾಳಿ ನಡೆಸಿದ ಪಾಲಿಕೆ ಸಹಾಯಕ ಆಯುಕ್ತೆ ಗೀತ ಮತ್ತು ತಂಡ ಕಾರ್ಯಾಚರಣೆ ನಡೆಸಿ ಬೇಕರಿ ಮಾಲೀಕನಿಗೆ 20 ಸಾವಿರ ದಂಡ ಹಾಕಿ ನೋಟೀಸ್ ನೀಡಿದ್ದಾರೆ. ಜತೆಗೆ ಅವಧಿ ಮುಗಿದ ತಿಂಡಿ ಪದಾರ್ಥಗಳನ್ನ ಸ್ಥಳದಲ್ಲೆ ನಾಶ ಮಾಡಿದ್ದಾರೆ.
Key words: Sale -expired –snacks-fine -bakery owner – Mysore city corporation