ಬೆಂಗಳೂರು,ಫೆ,12,2020(www.justkannada.in): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ ನಿಂದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಿಂದೆ ಸರಿದಿದ್ದಾರೆ.
ಹೌದು, ನಾಳೆ ಕರೆ ನೀಡಿರುಯವ ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಾಟಾಳ್ ನಾಗರಾಜ್, ನಾಳಿನ ಬಂದ್ ಗೆ ಬೆಂಬಲ ನೀಡಲ್ಲ. ಬದಲಾಗಿ ಮಾರ್ಚ್ 5 ರಂದು ಪ್ರತಿಭಟನೆ ನಡೆಸುತ್ತೇವೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಈ ವೇಳೆ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದ ಪ್ರಮುಖ ಕನ್ನಡ ಪರ ಸಂಘಟನೆಯಾದ ಟಿ.ಎ. ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮತ್ತೊಂದು ಪ್ರಮುಖ ಬಣವಾದ ಪ್ರವೀಣ್ ಶೆಟ್ಟಿ ಬಣ, ವಾಟಾಳ್ ನಾಗರಾಜ್ ಈ ಮುಷ್ಕರಕ್ಕೆ ತನ್ನ ಬೆಂಬಲ ಇಲ್ಲ ಎಂದು ಘೋಷಿಸಿದೆ. ಖಾಸಗಿ ಶಾಲಾ ಕಾಲೇಜುಗಳು ಕೇವಲ ನೈತಿಕ ಬೆಂಬಲವನ್ನು ಮಾತ್ರ ನೀಡಿವೆ.
ನಾಳಿನ ಬಂದ್ ಗೆ ಓಲಾ ಊಬರ್ ಮಾಲೀಕರ ಸಂಘಟನೆ ಬೆಂಬಲ ನೀಡಿದ್ದು ಈ ಹಿನ್ನೆಲೆ 1.5 ಲಕ್ಷ ಓಲಾ ಊಬರ್ ವಾಹನಗಳು 10 ಸಾವಿರ ಏರ್ ಪೋರ್ಟ್ ಟ್ಯಾಕ್ಸಿಗಳು , 6 ಸಾವಿರ ಖಾಸಗಿ ವಾಹನಗಳು, 2 ಲಕ್ಷ ಆಟೋಗಳು ಸೇರಿ 6 ಲಕ್ಷ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.
Key words: no support – tomorrow’-bandh- Kannada fighter- Vatal Nagaraj.