ಬೆಂಗಳೂರು,ಫೆ,13,2020(www.justkannada.in): ಸರೋಜಿನಿ ಮಹಿಷಿ ವರದಿ ಜಾರಿ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಡೆಸಲಾಗುತ್ತಿರುವ ಪ್ರತಿಭಟನಾ ಸ್ಥಳಕ್ಕೆ ನಮ್ಮ ಸಚಿವರನ್ನ ಕಳಿಸುತ್ತೇನೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬುದು ಒಳ್ಳೆಯ ವಿಚಾರ. ವರದಿ ಜಾರಿ ಬಗ್ಗೆ ವಿಪಕ್ಷಗಳ ಜತೆಯೂ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹಾಗೆಯೇ ಈ ಬಾರಿ ಬಜೆಟ್ ಗಾತ್ರ 2ಲಕ್ಷ 40 ಸಾವಿರ ಕೋಟಿಎ. 1.70 ಲಕ್ಷ ಕೋಟಿ ಆಡಳಿತ ವೆಚ್ಚವಾಗಲಿದೆ. ಬಜೆಟ್ ನಲ್ಲಿ ರೈತರಿಗೆ ಆದ್ಯತೆ ನೀಡಲಾಗುತ್ತದೆ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
Key words: Discuss – implementation -Sarojini Mahshi –Report-farmers –budget-CM BS Yeddyurappa.