ಬೆಂಗಳೂರು,ಫೆ,17,2020(www.justkannada.in): ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ನನ್ನ ಬೇಡಿಕೆ ಅಲ್ಲ. ಅದು ಮನವಿ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಆನಂದ್ ಸಿಂಗ್, ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಹಿಂದಿನ ಸರ್ಕಾರದಲ್ಲೂ ಮನವಿ ಮಾಡಿದ್ದೆ. ಆದರೆ ಮೈತ್ರಿ ಸರ್ಕಾರ ನನ್ನ ಮನವಿಗೆ ಸ್ಪಂದಿಸಲಿಲ್ಲ. ಈಗ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ನನ್ನ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.
ನನ್ನ ಮೇಲೆ ಆರೋಪವಿದ್ದು ಈಗ ಅಲ್ಲ ಬಿಜೆಪಿಗೆ ಸೇರಿದ ಮೇಲೆ ನನ್ನ ಮೇಲೆ ಆರೋಪ ಬಂದಿದ್ದಲ್ಲ. ನಾನು ಕಾಂಗ್ರೆಸ್ ಗೆ ಸೇರುವಾಗಲೇ ಆರೋಪ ಇತ್ತು ಅವಾಗಲೇ ಕಾಂಗ್ರೆಸ್ ನವರು ಹೇಳಬಹುದಿತ್ತಲ್ಲವೇ..? ಕಾಂಗ್ರೆಸ್ ಗೆ ಬರೋದು ಬೇಡ ಎಂದು ಆಗಲೇ ಹೇಳಬೇಕಿತ್ತು. ನನ್ನ ಅಫಿಡೆವಿಟ್ ನಲ್ಲಿ ಎಲ್ಲವನ್ನು ವಿವರ ನೀಡಿದ್ದೆನೆ ಎಂದು ಆನಂದ್ ಸಿಂಗ್ ತಿಳಿಸಿದರು.
Key words: separate district – Vijayanagar – not -my demand-Minister -Anand Singh.