ಬೀಜಿಂಗ್, ಫೆಬ್ರವರಿ 22, 2020 (www.justkannada.in): ಚೀನಾದಲ್ಲಿ ಕೊರೊನಾ ವೈರಸ್ ಭೀತಿ ಮತ್ತಷ್ಟು ಹೆಚ್ಚಾಗಿದೆ. ಜತೆಗೆ ಇದರಿಂದ ಸಾವಿಗೀಡಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಚೀನಾದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆಯು 2,345ಕ್ಕೆ ಏರಿಕೆಯಾಗಿದೆ. ಹೊಸದಾಗಿ 397 ಕೊರೊನಾ ವೈರಸ್ ಸೋಂಕು ಪೀಡಿತ ಪ್ರಕರಣಗಳು ಪತ್ತೆಯಾಗಿವೆ.
ಇದುವರೆಗೂ 76,288 ಜನರಿಗೆ ಸೋಂಕು ತಗುಲಿದೆ. ಚೀನಾದ ಹುಬೆ ಪ್ರಾಂತ್ಯದಲ್ಲಿ ಸಾವಿಗೀಡಾದವರ ಸಂಖ್ಯೆ ಹೆಚ್ಚಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ.
ಕೊರೊನಾ ವೈರಸ್ ಕೇಂದ್ರಬಿಂದುವಾಗಿರುವ ಹುಬೆ ಪ್ರಾಂತ್ಯದಲ್ಲಿ ಹೊಸದಾಗಿ 109 ಸಾವುಗಳು ಸಂಭವಿಸಿದ್ದು, ವುಹಾನ್ನಲ್ಲಿ 90 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಇದುವರೆಗೂ ಮೃತಪಟ್ಟವರ ಸಂಖ್ಯೆ 2,345ಕ್ಕೆ ಏರಿಕೆಯಾಗಿದೆ.
ಲೆಬನಾನ್ ಮತ್ತು ಇಸ್ರೇಲ್ನಲ್ಲಿ ಶುಕ್ರವಾರ ಮೊದಲ ಪ್ರಕರಣಗಳು ದೃಢಪಟ್ಟಿವೆ. ಸೋಂಕು ಪೀಡಿತ 13 ಹೊಸ ಪ್ರಕರಣಗಳ ಪೈಕಿ ಎರಡು ಸಾವುಗಳು ಸಂಭವಿಸಿವೆ ಎಂದು ಇರಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಇರಾನ್ನಲ್ಲಿ ಇದುವರೆಗೂ 18 ಸೋಂಕು ಪೀಡಿತ ಪ್ರಕರಣಗಳ ಪೈಕಿ 4 ಜನರು ಮೃತಪಟ್ಟಿದ್ದಾರೆ.