ಮೈಸೂರು,ಫೆ,25,2020(www.justkannada.in): ಎಲ್ಲಾ ವಯೋಮಾನ ಎಲ್ಲಾ ವರ್ಗದ ಜನರನ್ನು ಸೆಳೆಯುವ ಶಕ್ತಿ ಸಿರಿಯಲ್ ಗಳಿಗಿವೆ. ಅದರಲ್ಲೂ ಹೆಣ್ಣುಮಕ್ಕಳಿಗಂತೂ ಧಾರವಾಹಿಗಳೆಂದರೇ ಸಾಕು ಎಲ್ಲಿಲ್ಲದ ಆಸಕ್ತಿ ಇರುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಇಷ್ಟಪಡುವ ನೆಚ್ಚಿನ ಸೀರಿಯಲ್ ಗಳಲ್ಲೂ ಇದೀಗ ಸ್ವಚ್ಚತಾ ಅರಿವು ಮೂಡಿಸಲಾಗಿತ್ತಿದೆ.
ಹೌದು ಮೈಸೂರು ಮಹಾನಗರ ಪಾಲಿಕೆ ಧಾರಾವಾಹಿಗಳ ಮೂಲಕ ಸ್ವಚ್ಚತಾ ಸಂದೇಶ ಸಾರಲು ಮುಂದಾಗಿದೆ. ರಾಜ್ಯದಲ್ಲೇ ಮನೆಮಾತಾಗಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಸ್ವಚ್ಚತಾ ಅರಿವು ಮೂಡಿಸಲಾಗುತ್ತಿದೆ. ಸಿರೀಯಲ್ ಹಳ ಮೂಲಕ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.
ಇದ್ರಿಂದಾಗಿ ಸಾಂಸ್ಕೃತಿಕ ನಗರಿಯಲ್ಲಿ 20 ಪರ್ಸೆಂಟ್ ಕಸ ನಿರ್ವಹಣೆಯಾಗುತ್ತಿದೆ. ಈ ಬಗ್ಗೆ ಪಾಲಿಕೆ ಎನ್ವಿರಾನ್ಮೆಂಟಲ್ ಇಂಜಿನಿಯರ್ ಮೈತ್ರಿ ಅವರು ಜೊತೆಜೊತೆಯಲಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಧಾರಾವಾಹಿ ಮೂಲಕ ಕಸ ನಿರ್ವಹಣೆ ಕುರಿತು ಅರಿವು ಮೂಡಿಸಿರುವುದು ಅತಿ ಹೆಚ್ಚು ಜನರಿಗೆ ತಲುಪಿದೆ. ಜನರು ಕೂಡ ಈ ಬಗ್ಗೆ ನಮಗೆ ಪ್ರತಿಕ್ರಿಯೆ ನೀಡುತ್ತಿದ್ದು, ಮೈಸೂರಿನಲ್ಲಿ ಮಿಶ್ರ ಕಸದ ಸಮಸ್ಯೆ ಶೇಕಡ 20 ರಷ್ಟು ಕಡಿಮೆಯಾಗಿದೆ. ಸಣ್ಣ ಡೈಲಾಗ್ ಕೂಡಾ ದೊಡ್ಡ ಬದಲಾವಣೆಯನ್ನು ತಂದಿದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುವ ಅನಿರುದ್ದ್, ಎಲ್ಲರಿಗೂ ಮನಃಪೂರ್ವಕ ಧನ್ಯವಾದಗಳು, ಜನರು ಸ್ವಪ್ರೇರಿತವಾಗಿ ಕಸ ವಿಂಗಡಣೆ ಮಾಡಿ ನಗರ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಇದು ಪ್ರತಿಯೊಬ್ಬರ ಕರ್ತವ್ಯ. ಮುಂದಿನ ಪೀಳಿಗೆಗೆ ನಾವುಗಳು ಮಾಡುವ ಕೆಲಸಗಳು, ನಾವು ಸಾಮಾಜಿಕ ಕರ್ತವ್ಯಗಳನ್ನು ನಿಭಾಯಿಸುವ ರೀತಿ ಆದರ್ಶವಾಗಿರಲಿ. “ಬದಲಾವಣೆ ನಮ್ಮಿಂದಲೇ ಆಗಲಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Key words: Clean- awareness –mysore- city corporation-jote jotheyali-Serials.