ಬೆಂಗಳೂರು,ಫೆ,28,2020(www.justkannada.in): ಮಾಜಿ ಸಚಿವ ಎಂಟಿಬಿ ನಾಗರಾಜ್ ಮತ್ತು ಸಂಸದ ಬಚ್ಚೇಗೌಡರ ನಡುವೆ ಮುನಿಸು ಮುಂದುವರೆದಿದ್ದು ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಭೇಟಿಗೆ ಬಂದ ವೇಳೆ ಇಬ್ಬರು ಮುಖಾಮುಖಿಯಾದರೂ ಮಾತನಾಡದ ಪ್ರಸಂಗ ನಡೆದಿದೆ.
ಬೆಂಗಳೂರು ಡಾಲರ್ಸ್ ಕಾಲೋನಿಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಮೊದಲು ಸಂಸದ ಬಿ.ಎನ್. ಬಚ್ಚೇಗೌಡ ಭೇಟಿ ನೀಡಿದ್ದಾರೆ. ಬಿ.ಎಸ್.ವೈ. ಜೊತೆಗೆ ಮಾತನಾಡಿ ಬಿಎನ್ ಬಚ್ಚೇಗೌಡ ಮನೆಯಿಂದ ಹೊರಬಂದ ವೇಳೆ ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಆಗಮಿಸಿದ್ದಾರೆ.
ಈ ಸಮಯದಲ್ಲಿ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ಮುಖಾಮುಖಿಯಾದರೂ ಇಬ್ಬರು ಮಾತನಾಡಿಲ್ಲ. ಬಚ್ಚೇಗೌಡ ಸಿಎಂ ಭೇಟಿಯಾಗಿ ಹೋದ ಬಳಿಕ ಎಂಟಿಬಿ ನಾಗರಾಜ್ ಸಿಎಂ ಜೊತೆಗೆ ಚರ್ಚೆ ನಡೆಸಿದ್ದಾರೆ. ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್ ಗೆ ಸೋಲುಂಟಾಗಿತ್ತು. ಎಂಟಿಬಿ ನಾಗರಾಜ್ ಪರ ಸಂಸದ ಬಚ್ಚೇಗೌಡ ಪ್ರಚಾರಕ್ಕೆ ಬಂದಿರಲಿಲ್ಲ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಜಯಗಳಿಸಿದ್ದರು.
Key words: CM BS yeddyurappa-residence- visit- MTB Nagaraj – MP Bachegauda