ಬೆಂಗಳೂರು,ಫೆ,29,2020(www.justkannada.in): ಇತ್ತೀಚೆಗಷ್ಟೆ ರಾಜ್ಯ ಬಿಜೆಪಿ ಸರ್ಕಾರ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡತ್ತು, ಇದೀಗ ಬಿಬಿಎಂಪಿ ಬೆಂಗಳೂರಿನ ಜನಸಾಮಾನ್ಯರಿಗೊಂದು ಕಹಿಸುದ್ದಿ ನೀಡಲು ಮುಂದಾಗಿದೆ.
ಹೌದು ಇಂದಿರಾ ಕ್ಯಾಂಟಿನ್ ಊಟ ಮತ್ತು ಉಪಹಾರ ದರ ಪರಿಷ್ಕರಣೆಗೆ ಬಿಬಿಎಂಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಆರ್ಥಿಕ ಹೊರೆಯನ್ನ ತಗ್ಗಿಸುವ ಸಲುವಾಗಿ ದರ ಪರಿಷ್ಕರಣೆ ಮಾಡಿ ಊಟ ಹಾಗೂ ಉಪಹಾರದ ಬೆಲೆ ಏರಿಕೆ ಮಾಡಲು ಪ್ಲಾನ್ ರೂಪಿಸಿದೆ.
ದರಪರಿಷ್ಕರಣೆ ಮಾಡಿದರೇ ಊಟದ ಬೆಲೆಯನ್ನ 10 ರಿಂದ 15 ಉಪಹಾರದ ಬೆಲೆ 5ರಿಂದ 10 ರೂಗೆ ಏರಿಕೆ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಗುತ್ತಿಗೆದದಾರರಿಗೆ ಒಂದು ಊಟಕ್ಕೆ 22 ರೂ ನೀಡಲಾಗುತ್ತಿತ್ತು. ಇದರಲ್ಲಿ ಗ್ರಾಹಕರಿಂದ 10 ರೂ ಸರ್ಕಾರ 12 ರೂ ನೀಡುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಸರ್ಕಾರ ಅನುದಾನ ನೀಡದ ಹಿನ್ನೆಲೆ ಬಿಬಿಎಂಪಿಯೇ ಇಂದಿರಾ ಕ್ಯಾಂಟಿನ್ ಅನ್ನ ನಿರ್ವಹಣೆ ಮಾಡುತ್ತಿದ್ದು ಈ ಹಿನ್ನೆಲೆ ಆರ್ಥಿಕ ಹೊರೆ ತಗ್ಗಿಸಲು ಬೆಲೆ ಏರಿಕೆ ಮಾಡಲು ಚಿಂತನೆ ನಡೆಸಿದೆ.
Key words: BBMP- Plan – Indira Canteen –Dining- Rate