ಮೆಲ್ಬೋರ್ನ್, ಮಾರ್ಚ್ 09, 2020 (www.justkannada.in): ಪುರುಷರ ಐಪಿಎಲ್ ಮಾದರಿಯಲ್ಲಿಯೇ ಮಹಿಳೆಯರ ಐಪಿಎಲ್ ಲೀಗ್ ಆಯೋಜಿಸಬೇಕು ಅಂತಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಒತ್ತಾಯಿಸಿದ್ದಾರೆ.
2021ರಿಂದ ಮಹಿಳಾ ಐಪಿಎಲ್ ಟೂರ್ನಿಯನ್ನೂ ಆಯೋಜಿಸುವಂತೆ ಪ್ಲ್ಯಾನ್ ರೂಪಿಸುವಂತೆ ಸಲಹೆ ನೀಡಿದ್ದಾರೆ.
ಭಾರತದ ಮಹಿಳಾ ಕ್ರಿಕೆಟ್ನಲ್ಲಿ ಈಗಾಗಲೇ ಅನೇಕ ಅಮೂಲ್ಯ ಆಟಗಾರ್ತಿಯರಿದ್ದಾರೆ.
ಒಂದು ವೇಳೆ ಮಹಿಳೆಯರ ಐಪಿಎಲ್ ನಡೆಸಿದ್ದೇ ಆದ್ರೆ, ತಂಡಕ್ಕೆ ಮತ್ತಷ್ಟು ಸಹಾಯವಾಗಲಿದೆ. ಹೊಸ ಪ್ರತಿಭೆಗಳು ಬೆಳಕಿಗೆ ಬರುವ ಮೂಲಕ ಭವಿಷ್ಯದಲ್ಲಿ ದೊಡ್ಡ ಟೂರ್ನಿಗಳನ್ನ ಗೆಲ್ಲೋದಕ್ಕೆ ಸಹಕಾರಿಯಾಗಲಿದೆ ಅಂತಾ ಗವಾಸ್ಕರ್ ಹೇಳಿದ್ದಾರೆ.