ಮೈಸೂರು,ಮಾ,9,2020(www.justkannada.in): ಮೈಸೂರು ರೇಸ್ ಕೋರ್ಸ್ ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಕ್ರಮವಾಗಿ ಕುದುರೆ ಜೂಜಾಡುತ್ತಿದ್ದ 8 ಮಂದಿಯನ್ನ ಬಂಧಿಸಿದ್ದಾರೆ.
ವಿಶ್ವನಾಥ್, ಹರೀಶ್, ಅಮೀನ್, ಸುನೀಲ್ ಕುಮಾರ್, ಸಿ.ಎನ್ ಪ್ರಕಾಶ್, ಶ್ರೀನಿವಾಸ್, ಶಶಿಕುಮಾರ್, ಶಂಕರ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 2,32,910. ರೂ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಸ್ ಕೋರ್ಸ್ ಷರತ್ತುಗಳನ್ನು ಉಲ್ಲಂಘಿಸಿ 8 ಮಂದಿ ಆರೋಪಿಗಳು ಜೂಜಾಡುತ್ತಿದ್ದರು ಎನ್ನಲಾಗಿದೆ.
ಈ ಹಿನ್ನೆಲೆ 8 ಮಂದಿಯನ್ನ ಬಂಧಿಸಲಾಗಿದ್ದು, ಈ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: mysore-CCB –attack-Arrest – horse race -betting -scandal.