ಮೈಸೂರು,ಮಾ,11,2020(www.justkannada.in): ಕರೋನ ಭೀತಿ ಹಿನ್ನೆಲೆ. ಮಾಸ್ಕ್ ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ. ನಗರದ ಮೆಡಿಕಲ್ ಶಾಪ್ ಗಳಿಗೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ಮತ್ತ ಸಾಮಜಿಕ ನ್ಯಾಯ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಿ ನೇತೃತ್ವದಲ್ಲಿ ಮೆಡಿಕಲ್ ಶಾಪ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಗದಿತ ದರಕ್ಕಿತ ಹೆಚ್ಚಿನ ಬೆಲೆ ಮಾರಟ ಮಾಡದಂತೆ ವರ್ತಕರಿಗೆ ಸೂಚನೆ ನೀಡಿದರು.
ಮೆಡಿಕಲ್ ಸ್ಟೋರ್ ಗಳಲ್ಲಿ ಮಾಸ್ಕ್ ಲಭ್ಯತೆ ಪರಿಶೀಲಿಸಿ ಬಳಿಕ ಮಾತನಾಡಿದ ಆರೋಗ್ಯಾಧಿಕಾರಿ ಡಾ ನಾಗರಾಜ್. ಮಾಸ್ಕ್ ಗಳಿಗೆ ಹೆಚ್ವು ಬೇಡಿಕೆ ಇರುವುದರಿಂದ ದುಬಾರಿ ಬೆಲೆಗೆ ಮಾರಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅದರಂತೆ ನಮ್ಮ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಎನ್ 90 ಮಾಸ್ಕ್ ಗಳು ಲಭ್ಯವಿಲ್ಲ. ಮಾಸ್ಕ್ ಲಭ್ಯತೆ ಮತ್ತು ಅದರ ದರವನ್ನ ಸಾರ್ವಜಕರಿಗೆ ಕಾಣುವಂತೆ ಬೋರ್ಡ್ ಹಾಕಲು ಮೆಡಿಕಲ್ ಸ್ಟೋರ್ ನವರಿಗೆ ಸೂಚನೆ ನೀಡಿದ್ದೇವೆ. ಅದರ ಇನ್ವಾಯಸ್ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಔಷಧಿ ನಿಯಂತ್ರಣ ಮಂಡಳಿಯವರಿಗೂ ವಿಷಯ ತಿಳಿಸಿಲಾಗಿದೆ ಎಂದರು.
ಹೆಚ್ಚು ಬೆಲೆಗೆ ಮಾಸ್ಕ್ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತೆ. ಅಗತ್ಯವಿರುವರು ಮಾತ್ರ ಮಾಸ್ಕ ಬಳಸುವುದು ಉತ್ತಮ. ನೆಗಡಿ, ಕೆಮ್ಮು ಸೀನು ಇರುವಂತವರು ಮಾಸ್ಕ್ ಧರಿಸುವುದು ಉತ್ತಮ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ನಾಗರಾಜ್ ಹೇಳಿದರು.
Key words: Corona Fear- Masks – high-price- sales –mysore -visit -medical shops