ನವದೆಹಲಿ, ಮಾರ್ಚ್ 13, 2020 (www.justkannada.in): ಆಸ್ಟ್ರೇಲಿಯಾ ತಂಡ ಮತ್ತು ರಾಯಲ್ ಚಾಲೆಂಜರ್ಸ್ ತಂಡದ ವೇಗಿ ಕೇನ್ ರಿಚರ್ಡ್ಸನ್ಗೆ ಕರೊನಾ ವೈರಸ್ ಸೊಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
14 ದಿನಗಳ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸದಿಂದ ತವರಿಗೆ ವಾಪಸಾದ ರಿಚರ್ಡ್ಸನ್, ಗಂಟಲು ಕೆರತ ಅಂತ ಆಸಿಸ್ ಮೆಡಿಕಲ್ ಸ್ಟಾಫ್ಗೆ ಕಂಪ್ಲೆಂಟ್ ಮಾಡಿದ್ದಾರೆ. ಸದ್ಯ ವೇಗಿ ರಿಚರ್ಡ್ಸನ್ರನ್ನ ತಂಡದ ಆಟಗಾರರಿಂದ ದೂರ ಇರಿಸಿ, ಚಿಕಿತ್ಸೆಗೆ ನೀಡಲಾಗುತ್ತಿದೆ.
ವರದಿಗಾಗಿ ಕಾಯುತ್ತಿರುವ ಆಸಿಸ್ ಮೆಡಿಕಲ್ ಸ್ಟಾಫ್, ರಿಪೋರ್ಟ್ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಒಂದು ವೇಳೆ ರಿಚರ್ಡ್ಸನ್ಗೆ ಕೊರೊನಾ ಸೊಂಕು ಪಾಸಿಟಿವ್ ಬಂದ್ರೆ, ನ್ಯೂಜಿಲೆಂಡ್ ಸರಣಿ ಮತ್ತು ಐಪಿಎಲ್ನಿಂದ ದೂರ ಉಳಿಯಲಿದ್ದಾರೆ.