ಮೈಸೂರು,ಮಾ,13,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆಗಿಳಿಯಲು ಡಬ್ಬಲ್ ಡೆಕ್ಕರ್ ಬಸ್ ಗಳು ಸಜ್ಜಾಗಿವೆ. ಇನ್ಮುಂದೆ ಡಬಲ್ ಡೆಕ್ಕರ್ ಬಸ್ ನಲ್ಲಿ ಕುಳಿತು ಮೈಸೂರಿನಲ್ಲಿ ಪ್ರವಾಸಿತಾಣಗಳ ವೀಕ್ಷಣೆಗೆ ಮಾಡಬಹುದಾಗಿದೆ.
ಮೈಸೂರಿಗರ ಬಹುದಿನಗಳ ಬೇಡಿಕೆಗೆ ಸರ್ಕಾರ ಅಸ್ತು ಎಂದಿದ್ದು, ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಸಲಾಗುತ್ತಿದೆ. ಮೈಸೂರಿನಲ್ಲಿ ಕೇವಲ ದಸರಾ ಸಂದರ್ಭಗಳಲ್ಲಿ ಮಾತ್ರ ಡಬಲ್ ಡೆಕ್ಕರ್ ಬಸ್ ಸಂಚರಿಸುತ್ತಿತ್ತು ಇದೀಗ ವರ್ಷವಿಡೀ ಡಬಲ್ ಡೆಕ್ಕರ್ ಬಸ್ ನ ಸೌಲಭ್ಯ ಸಿಗಲಿದೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೈಸೂರಿಗೆ ಡಬಲ್ ಡೆಕ್ಕರ್ ಬಸ್ ಸೇವೆ ನೀಡಲು ಮುಂದಾಗಿದೆ.
ಮೈಸೂರಿನಲ್ಲಿ ಒಟ್ಟು 6 ಡಬಲ್ ಡೆಕ್ಕರ್ ಬಸ್ ಸಂಚರಿಸಲಿವೆ. ಸದ್ಯ ಒಂದು ಬಸ್ ಮೈಸೂರಿಗೆ ಆಗಮಿಸಿದ್ದು ಏಪ್ರಿಲ್ 1ರಿಂದ ಸಂಚಾರ ಆರಂಭಿಸಲಿದೆ. ಉಳಿದ ಐದು ಬಸ್‌ಗಳು ಮಾರ್ಚ್ ಅಂತ್ಯಕ್ಕೆ ಮೈಸೂರಿಗೆ ಆಗಮಿಸಲಿವೆ.ಬೆಂಗಳೂರು ಮೂಲದ ಕೆಎಂಎಸ್ ಕೋಚ್ ಬಿಲ್ಡರ್ಸ್ ಸಂಸ್ಥೆ 6 ಡಬಲ್ ಡೆಕ್ಕರ್ ಬಸ್‌ಗಳ ಬಾಡಿ ತಯಾರು ಮಾಡಿದ್ದು,ಪ್ರತಿ ಬಸ್‌ಗಳು 40 ಸೀಟುಗಳ ಸಾಮರ್ಥ್ಯ ಹೊಂದಿವೆ. ಕೆಳಗೆ 20 ಹಾಗೂ ಮೇಲೆ 20 ಸೀಟುಗಳನ್ನು ಅಳವಡಿಕೆ ಮಾಡಲಾಗಿದೆ
ಪ್ರವಾಸೋದ್ಯಮಗಳ ಸ್ಥಳದ ಬಗ್ಗೆ ಬಸ್ ನಲ್ಲೇ ಮಾಹಿತಿ ನೀಡಲಾಗುತ್ತಿದ್ದು ಎಲ್ ಇಡಿ ಟಿವಿ ಮೂಲಕ ಪ್ರವಾಸಿ ತಾಣಗಳ ವಿಡಿಯೋ ಹಾಗೂ ಆಡಿಯೋದಲ್ಲಿ ಮಾಹಿತಿ ಸಿಗಲಿದೆ. ಮೈಸೂರು ನಗರದಾದ್ಯಂತ 35ಕಿ.ಲೋ ವ್ಯಾಪ್ತಿಯಲ್ಲಿ ಈ ಬಸ್ ಗಳು ಸಂಚಾರ ನಡೆಸಲಿವೆ. ಸಾರ್ವಜನಿಕರ ಕೈಗೆಟಕುವ ಹಾಗೆ ಟಿಕೇಟ್ ದರ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ.
Key words: Double-decker- bus – Mysore –tourist place
.