ಬೆಂಗಳೂರು,ಮಾ 13,2020(www.justkannada.in): ಶಾಲಾ ಮಕ್ಕಳಿಗೆ ಕೃಷಿ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕೃಷಿ ವಿವಿ ಸಹಯೋಗದೊಂದಿಗೆ “ಕೃಷಿ ಪ್ರವಾಸ” ಯೋಜನೆ ರೂಪಿಸಲು ಚಿಂತನೆ ನಡೆಸಿರುವುದಕ್ಕೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾವು ನೀಡಿದ ಪ್ರಸ್ತಾಪವನ್ನು ಪರಿಗಣಿಸಿ ಶಾಲಾ ಮಕ್ಕಳಿಗೆ ಕೃಷಿ ಪ್ರವಾಸ ಯೋಜನೆ ರೂಪಿಸಲು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಚಿಂತನೆ ನಡೆಸಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಶಾಲಾ ಮಕ್ಕಳಿಗೆ ಈ ರೀತಿಯಾಗಿ ಕೃಷಿ ಪ್ರವಾಸ ಕೈಗೊಳ್ಳುವುದರಿಂದ ನಗರ ಪ್ರದೇಶದ ಮಕ್ಕಳಿಗೆ ರೈತರ ಬಗ್ಗೆ ಅರಿವು, ಬೆಳೆಯ ತಳಿ, ಫಸಲು ಬೆಳೆಯುವ ವಿಧಾನವೂ ಸೇರಿದಂತೆ ಕೃಷಿ ಬಗ್ಗೆ ಹೆಚ್ಚಿನ ಜ್ಞಾನ ಮೂಡಿಸಲು ನೆರವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
Key words: Thinking –children- farm trip- Agriculture Minister – B.C. Patil-thankfull