ಮೈಸೂರು, ಮೇ 27, 2019 : (www.justkannada.in news) ಈ ಸಾಲಿನಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದಾನಿಲಯದಲ್ಲಿ ಪ್ರವೇಶಾತಿ ಪಡೆದ ಸ್ನಾತಕ ಹಾಗೂ ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಡ್ಡಾಯಗೊಳಿಸಲಾಗಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ KSOU ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ಈ ಬಗ್ಗೆ ಮಾಹಿತಿ ನೀಡಿದರು..
ಕಾರ್ಯಕ್ರಮಗಳಾದ ಆಡಳಿತ ಕನ್ನಡ, English for Communication and Soft Skills, Web Designing, Computer Fundamentals, Desk Top Publishing (DTP), Multimedia ಮತ್ತು Basics of Networking ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.
ಸ್ನಾತಕ ವಿಧ್ಯಾರ್ಥಿಗಳಿಗೆ ಮೂರು ಹಂತಗಳ ಕೌಶಲ್ಯಾಭಿವೃದ್ಧಿ ಶಿಕ್ಷಣಕ್ರಮವಿದ್ದು, ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ಎರಡು ಹಂತಗಳ ಕೌಶಲ್ಯಾಭಿವೃದ್ಧಿ ಶಿಕ್ಷಣಕ್ರಮವಿರುತ್ತದೆ. ಒಂದೊಂದು ಹಂತಗಳಿಗೆ ಒಂದೊಂದು ವರ್ಷದಲ್ಲಿ ತರಬೇತಿ ನೀಡಲಾಗುತ್ತದೆ. ಮೊದಲನೇ ಹಂತದ ಕೌಶಲ್ಯಾಭಿವೃದ್ಧಿ ಶಿಕ್ಷಣಕ್ರಮದ ವೇಳಾಪಟ್ಟಿ ಮುಕ್ತ ವಿವಿ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕಾಗಿರುತ್ತದೆ. ಈ ತರಬೇತಿಗಳು ದಿನಾಂಕ : 02-06-2019 ರಿಂದ 30-06-2019 ರ ಅವಧಿಯಲ್ಲಿ ವಿವಿಧ ದಿನಾಂಕಗಳಂದು ಮೈಸೂರು, ಬೆಂಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ ಹಾಗೂ ಉಡುಪಿಯಲ್ಲಿ ನಡೆಯಲಿದೆ.
ಕೌಶಲ್ಯಾಭಿವೃದ್ಧಿ ತರಬೇತಿಗೆ ಹಾಜರಾದ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ. ವಿಧ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾನಿಲಯದ ಅಂತರ್ಜಾಲ www.ksoumysore.karnataka.gov.in. ಸಂಪರ್ಕಿಸುವುದು.
ಪತ್ರಿಕಾಗೋಷ್ಠಿಯಲ್ಲಿ ಕೆಎಸ್ ಒಯು ಕುಲಸಚಿವ ಪ್ರೊ.ರಮೇಶ್ ಉಪಸ್ಥಿತರಿದ್ದರು.
Key words: Skill Development training is mandatory for undergraduate and postgraduate students in KSOU
#KSOU #ChancellorProf.DShivalingaiah #SkillDevelopment