ಮೈಸೂರು,ಮಾ,14,2020(www.justkannada.in): ಎಲ್ಲೆಡೆ ಕೋರಾನಾ ವೈರಸ್ ಭೀತಿ ಹರಡಿರುವ ಹಿನ್ನಲೆ. ಮೈಸೂರು ಮಹಾ ನಗರ ಪಾಲಿಕೆಗೆ ಹೈ ಆಲರ್ಟ್ ಆಗಿದ್ದು ಇಂದು ಬೆಳ್ಳಂಬೆಳಿಗ್ಗೆಯೇ ನಗರದ ದೇವರಾಜ ಮಾರುಕಟ್ಟೆಗೆ ಪಾಲಿಕೆ ತಂಡ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿತು.
ಮೈಸೂರು ಮೇಯರ್ ತಸ್ಲಿಂ ನೇತೃತ್ವದಲ್ಲಿ ಪಾಲಿಕೆ ಅರೋಗ್ಯ ಅಧಿಕಾರಿಗಳು ಉಪ ಮೇಯರ್ ಶ್ರೀಧರ್, ಪಾಲಿಕೆ ಸದಸ್ಯೆ ಶೋಭ ಸೇರಿ ಇತರರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ವಚ್ಚತೆ ಕಾಪಾಡುವಂತೆ ಅಲ್ಲಿನ ವ್ಯಾಪಾರಿಗಳಿಗೆ ಸೂಚನೆ ನೀಡಿದರು.
ಹಾಗೆಯೇ ಸ್ವಚ್ಚತೆಗೆ ಸಹಕರಿಸದಿದ್ದರೆ ಮಾರ್ಕೆಟ್ ಬಂದ್ ಮಾಡುವುದಾಗಿ ಪಾಲಿಕೆ ಅಧಿಕಾರಿಗಳು ಮತ್ತು ತಂಡ ಎಚ್ಚರಿಕೆ ನೀಡಿತು.
Key words: Visit- Devaraja Market – morning-Mysore – city corporation- warned -traders.