ಮೈಸೂರು,ಮಾ,14,2020(www.justkannada.in): ಕೊರೊನಾ ಭೀತಿ ರಾಜ್ಯದಲ್ಲೆಡೆ ಹರಡಿದ್ದು ಈ ಹಿನ್ನೆಲೆ ಜೆಎಸ್ ಎಸ್ ಶಿಕ್ಷಣ ಸಂಸ್ಥೆಗಳ ಕೆಲವು ಕಾರ್ಯಕ್ರಮಗಳು ರದ್ದು ಮಾಡಲಾಗಿದೆ.
ಜೆಎಸ್ ಎಸ್ ಸಂಸ್ಥೆ ಕೆಲ ದೊಡ್ಡ ಮಟ್ಟದ ಕಾರ್ಯಕ್ರಮವನ್ನ ಉದ್ಘಾಟನೆಗಷ್ಟೆ ಸೀಮಿತಿಗೊಳಿಸಿದೆ. ಇಂದು ಸ್ಕಿಲ್ ಸಿಮ್ಯುಲೇಶನ್ ಸೆಂಟರ್ ಉದ್ಘಾಟನೆ ಮಾಡಲಾಗಿದ್ದು ಈ ಕಾರ್ಯಕ್ರಮವನ್ನ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಲಾಗಿತ್ತು.
ಆದರೆ ಕೊರೋನಾ ಸೋಂಕು ಹರಡುವ ಭೀತಿಯಿಂದಾಗಿ ದೊಡ್ಡಮಟ್ಟದ ಕಾರ್ಯಕ್ರಮಗಳನ್ನ ನಡೆಸದಂತೆ ಸರ್ಕಾರ ಆದೇಶಿಸಿದೆ. ಹೀಗಾಗಿ ಕೇವಲ ಸ್ಕಿಲ್ ಸಿಮ್ಯುಲೇಶನ್ ಸೆಂಟರ್ ಉದ್ಘಾಟನೆ ಅನ್ನ ಉದ್ಘಾಟನೆ ಮಾಡಲಾಯಿತು. ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಉದ್ಘಾಟನೆ ಮಾಡಿದರು. ಕೆಲವೇ ಕೆಲವು ಮಂದಿಯಷ್ಟೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಸುತ್ತೂರು ಶ್ರೀಗಳು, ಕೊರೊನಾ ಎಂಬ ಕೆಟ್ಟ ವೈರಸ್ ಜಗತ್ತಿನಾದ್ಯಂತ ಹರಡಿದೆ. ಹಿಂದೆ ಭಾರತದಲ್ಲಿ ಕಾಲರ ಬಂದಾಗ ಜನರು ಎಚ್ಚರಿಕೆ ವಹಿಸಿದ್ರು. ಇದು ಕೂಡ ಅತ್ಯಂತ ಅಪಾಯಕಾರಿಯಾದ ವೈರಸ್. ಇದರಿಂದಾಗಿ ಜನರು ಎಚ್ಚರಿಕೆಯಿಂದರಬೇಕು ಎಂದು ಸಲಹೆ ನೀಡಿದರು.
ನಾನು ಎರಡು ಕಾರ್ಯಕ್ರಮಗಳನ್ನ ರದ್ದು ಮಾಡಿದ್ದೇನೆ. ೧೦-೧೫ ಜನ ಸೇರುತ್ತಿದ್ದ ಕಾರ್ಯಕ್ರಮ ರದ್ದು ಮಾಡಿದ್ದೇನೆ. ಸರ್ಕಾರ ಸೂಚನೆಯನ್ನ ಪಾಲಿಸುತ್ತಿದ್ದೇನೆ. ಜನರು ಕೂಡ ಸರ್ಕಾರದ ಸೂಚನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಂದಿನ ನಿಗದಿತ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಮಾಡಿದ್ದೇವೆ. ಹೆಚ್ಚು ಜನರು ಜನರು ಸೇರದಂತೆ ನೋಡಿಕೊಳ್ಳಲಾಗಿದೆ ಎಂದು ಸುತ್ತೂರು ಶ್ರೀಗಳು ಹೇಳಿದರು.
Key words: Corona – mysore – inauguration – limited –program-JSS Institute.