ಬೆಂಗಳೂರು,ಮಾ,14,2020(www.justkannada.in): ಕೊರೋನಾ ವೈರಸ್ ತಡೆಗೆ ಪ್ರತ್ಯೇಕ ಬಜೆಟ್ ಮಂಡಿಸಿ ರಾಜ್ಯಗಳಿಗೆ ಹಣ ಹಂಚಿಕೆ ಮಾಡಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಇಂದು ಕೊರೋನಾ ವೈರಸ್ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕೊರೋನಾ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರ ಸರ್ಕಾರದ ನಾಯಕರು ಕೇವಲ ಭಾಷಣ ಬಿಗಿಯುತ್ತಿದ್ದಾರೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಕೊರೋನಾಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು. ರಾಜ್ಯಗಳಿಗೆ ಹಣ ಹಂಚಿಕೆ ಮಾಡಿ. ಕೊರೋನಾ ತಡೆಗೆ ಮುಂದಾಗಿ ಎಂದು ಒತ್ತಾಯಿಸಿದರು.
ಇನ್ನು ರಾಜ್ಯ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದರೇ ಸಾಲದು. ಅದಕ್ಕೆ ತಕ್ಕದಾಗಿ ಮುಂಜಾಗ್ರತೆ, ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕು. ಕೊರೊನಾ ಬಗ್ಗೆ ಜನ ಭಯಭೀತರಾಗಿದ್ದಾರೆ. ಕೊರೋನಾ ಲಕ್ಷಣಗಳಿದ್ದರೇ ಮಾತ್ರ ಭಯಪಡಬೇಕು. ಇಲ್ಲದಿದ್ದರೇ ಆತಂಕಪಡುವ ಅಗತ್ಯವಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.
ಹಾಗೆಯೇ ಇಲ್ಲಿಯವರೆಗೆ ನಮ್ಮ ರಾಜ್ಯದಲ್ಲಿ ಯಾರಿಗೂ ಕೋರೊನಾ ಹರಡಿಲ್ಲ. ಹೊರದೇಶದಿಂದ ಬಂದಿರೋರಿಗೆ ಮಾತ್ರ ಕೊರೊನಾ ವೈರಸ್ ತಗುಲಿದೆ. ಸ್ಥಳೀಯರಿಂದ ಕೊರೊನಾ ಬಂದಿಲ್ಲ. ದೆಹಲಿ ಮಹಿಳೆಯೂ ಹೊರದೇಶದಿಂದ ಬಂದ ಮಗನಿಂದಾಗಿ ಮೃತಪಟ್ಟಿದ್ದಾರೆ. ಕಲಬುರ್ಗಿಯಲ್ಲಿ ಸತ್ತ ವ್ಯಕ್ತಿಯೂ ಸೌದಿಯಿಂದ ಬಂದಿದ್ದರು. ಇಲ್ಲಿಯವರಿಗೆ ಕೊರೊನಾ ಸ್ಥಳೀಯರಿಂದ ಬಂದಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.
Key words: Separate- budget –Corona- Distribute- money – states-Former CM- Siddaramaiah – Central governament