ತುಮಕೂರು,ಮೇ,27,2019(www.justkannada.in): ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಲಲು ಝೀರೋ ಟ್ರಾಫಿಕ್ ಕಾರಣ ಎಂದು ಡಿಸಿಎಂ ಪರಮೇಶ್ವರ್ ವಿರುದ್ದ ಮಾಜಿ ಶಾಸಕ ಕೆ.ಎನ್ ರಾಜಣ್ಣ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ತುಮಕೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ, ತುಮಕೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಮೈತ್ರಿಕೂಟದ ಅಭ್ಯರ್ಥಿ ಇಲ್ಲಿ ಸೋಲಲು ಝೀರೋ ಟ್ರಾಫಿಕ್ ಕಾರಣ. ಇನ್ನೊಂದು ವಾರ ಝೀರೋ ಟ್ರಾಫಿಕ್ ಕೆಳಗಿಳಿಯಲಿದೆ. ಮೋದಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಮ್ಮಿಶ್ರ ಸರ್ಕಾರ ಉರುಳುತ್ತದೆ ಎಂದು ಪರಮೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದರು.
ಇದೇ ವೇಳೆ ಡಿಸಿಎಂ ಪರಮೇಶ್ವರ್ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕೆ.ಎನ್ ರಾಜಣ್ಣ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆತನ ಗೆಲುವಿಗೆ ನಾನು ನೆರವಾಗಿದ್ದೆ. ಇದರ ಸ್ಮರಣೆಯೇ ಆತನಿಗಿಲ್ಲ ಎಂದು ಕಿಡಿಕಾರಿದರು.
ಸಚಿವ ರೇವಣ್ಣರ ಕೆಎಂಎಫ್ ಗೋಲ್ ಮಾಲ್ ದಾಖಲೆ ನನ್ನ ಬಳಿ ಇದೆ..
ಹಾಗೆಯೇ ಸಚಿವ ಹೆಚ್.ಡಿ ರೇವಣ್ಣ ವಿರುದ್ದ ಗಂಭೀರ ಆರೋಪ ಮಾಡಿದ ಕೆ.ಎನ್ ರಾಜಣ್ಣ, ಹೆಚ್.ಡಿ ರೇವಣ್ಣ ಕೆಎಂಎಫ್ ನಲ್ಲಿ ಗೋಲ್ ಮಾಲ್ ಮಾಡಿದ್ದಾರೆ. ಕೆಎಂಎಫ್ ಗೋಲ್ ಮಾಲ್ ದಾಖಲೆ ನನ್ನ ಬಳಿ ಇದೆ. ಅವರು ಏನು ಮಾಡುತ್ತಾರೆ ಮಾಡಲಿ. ನಾನು ಅಫೆಕ್ಸ್ ಬ್ಯಾಂಕ್ ನಲ್ಲಿ ಐದು ವರ್ಷ ಪೂರೈಸಿಯೇ ಸಿದ್ದ. ರೇವಣ್ಣ ಬರಲಿ, ಅವರ ತಾತನೇ ಬರಲಿ ನಾನು ಐದು ವರ್ಷ ಅಧಿಕಾರ ಪೂರೈಸುತ್ತೇನೆ ಎಂದು ಹೇಳಿದರು.
Key words: The reason for the defeat of the alliance candidate in the tumakuru Lok Sabha polls is Zero Traffic-KN Rajanna.
#tumakur #knrajanna #Gparameshwar #ZeroTraffic