ಬೆಂಗಳೂರು,ಮಾ,18,2020(www.justkannada.in): ರಾಜ್ಯದೆಲ್ಲೆಡೆ ಕೊರೋನಾ ಭೀತಿ ಹೆಚ್ಚಾಗಿದ್ದು ಈ ನಡುವೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ವೈದ್ಯರೊಬ್ಬರು ಬ್ರಿಟನ್ ನಿಂದ ಬಂದಿದ್ದ ಕೊರೋನಾ ಸೋಂಕಿತ ಯುವತಿ ಜತೆ ಆಸ್ಪತ್ರೆ ಆವರಣದಲ್ಲಿ ಸುತ್ತಾಡಿ ಯಡವಟ್ಟು ಮಾಡಿರುವ ಘಟನೆ ವರದಿಯಾಗಿದೆ.
ಲಂಡನ್ನಿಂದ ಬಂದ ಯುವತಿಗೆ ಕೊರೋನಾ ಸೋಂಕು ಪಾಸಿಟಿವ್ ಇರುವುದು ದೃಢವಾಗಿದೆ. ಆದರೆ ಬ್ರಿಟನ್ ನಿಂದ ಬಂದಿದ್ದ ಈ ಸೋಂಕಿತ ಯುವತಿಯ ಜತೆ ವಿಕ್ಟೋರಿಯಾ ಆಸ್ಪತ್ರೆಯ ನೆಪ್ರೋಯುರಾಲಾಜಿ ವೈದ್ಯರೊಬ್ಬರು ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ ಕೊರೋನಾ ಸೋಂಕಿತ ಯುವತಿ ಜತೆ ವೈದ್ಯ ಸುತ್ತಾಡಿದ್ದಾರೆ. ಅದ್ದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತಂಕ ಮನೆ ಮಾಡಿದೆ.
ವಿದೇಶದಿಂದ ಬಂದ ನಂತರ ಈ ಯುವತಿ ಮನೆಯಲ್ಲಿ ಇರಬೇಕಿತ್ತು. ಆದರೆ ಅವರು ವೈದ್ಯರ ಜೊತೆ ಆಸ್ಪತ್ರೆಯ ಆವರಣದಲ್ಲಿ ಓಡಾಡಿಕೊಂಡಿದ್ದರು. ಇನ್ನು ನೆಪ್ರೋಯುರಾಲಜಿ ವೈದ್ಯ ಕೂಡ ಆಸ್ಪತ್ರೆಯ ಕೆಲ ಮೀಟಿಂಗ್ನಲ್ಲಿ ಭಾಗಿಯಾಗಿದ್ದರು. ಯುವತಿಗೆ ಸೋಂಕು ಇರುವ ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯರು ರಜೆ ಹಾಕಿದ್ದು ಇದೀಗ ನೆಫ್ರೋಯುರಾಲಾಜಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಆತಂಕ ಮನೆ ಮಾಡಿದೆ.
Key words: Victoria Hospital- Doctor- Yadavattu-coronavirus- infected- young woman.