ಬೆಂಗಳೂರು,ಮಾ,19,2020(www.justkannada.in): ಕೊರೋನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಅದನ್ನ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿವೆ. ಈ ನಡುವೆ ಕೊರೋನಾ ಸೋಂಕು ತಡೆಗಟ್ಟಲು ಹಲವು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡರೂ ಸೋಂಕು ಹರಡುವಿಕೆ ದಿನೇ ದಿನೇ ಹೆಚ್ಚುತ್ತಿದ್ದು ಹೀಗಾಗಿ ಇನ್ನಷ್ಟು ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಹೀಗಾಗಿ ಇಂದಿನಿಂದ ವಿದೇಶದಿಂದ ಬರುವ ಪ್ರಯಾಣಿಕರಿಗೆ ಸ್ಟ್ಯಾಂಪಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ವಿದೇಶದಿಂದ ಬಂದ ಪ್ರಯಾಣಿಕರ ಕೈಗೆ ಸ್ಟ್ಯಾಂಪ್ ಹಾಕಲಾಗುತ್ತದೆ. ಸ್ಟ್ಯಾಂಪ್ ನಲ್ಲಿ ಆ ವ್ಯಕ್ತಿ ವಿದೇಶದಿಂದ ಬಂದ ದಿನಾಂಕ ನಮೂದಾಗಿರುತ್ತದೆ. ಸ್ಟ್ಯಾಂಪ್ ಇದ್ದ ವ್ಯಕ್ತಿ ಕಡ್ಡಾಯವಾಗಿ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು. ಅವರ ಮೇಲೆ ನಿಗಾ ಇಡಲಾಗುತ್ತದೆ.
ಇನ್ನು ಮುದ್ರೆ ಹಾಕಿಸಿಕೊಂಡವರು ಹೊರಹೋಗುವ ಆಗಿಲ್ಲ. ಇಂದಿನಿಂದ ವಿದೇಶದಿಂದ ಬರುವ ಪ್ರಯಾಣಿಕರ ಬಲಗೈಗೆ ಸ್ಟ್ಯಾಂಪಿಂಗ್ ಹಾಕಲಾಗುತ್ತದೆ ಎಂದು ನಿನ್ನೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು.
Keywords: corona virus-effect- Stamping system – coming – abroad