ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

 

ಮೈಸೂರು, ಮಾ.30, 2020 : (www.justkannada.in news ) ಕರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ್ದರೂ ಓಡಾಡುವ ಸಾರ್ವಜನಿಕರಿಗೆ ಬುದ್ದಿವಾದ ಹೇಳುವ ಬದಲು‌ ಅನಗತ್ಯವಾಗಿ ಟೀಕೆ ಮಾಡಿದ ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್ ರಂಗನಾಥ್ ಗೆ ಅವರದ್ದೇ ಶೈಲಿಯಲ್ಲೇ ವ್ಯಕ್ತಿಯೊಬ್ಬರು ಟೀಕೆ ಮಾಡಿ ತಿರುಗೇಟು ನೀಡಿದ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಸಾಮಾಜಿಕ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಅವರು ಮಾಡಿರುವ ವಿಡಿಯೋದಲ್ಲಿ ಪತ್ರಕರ್ತ ರಂಗನಾಥ್ ಅವರ ಕಾಲೆಳೆದಿದ್ದಾರೆ. ಕೆಲವೇ ಕೆಲ ಸಮಯದಲ್ಲಿ 46 ಸಾವಿರ ಮಂದಿ ಈ ವಿಡಿಯೋ ವೀಕ್ಷಿಸಿದ್ದು, 1000ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದರೆ, 1500ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಜತೆಗೆ ಅಸಂಖ್ಯಾತ ನೋಡುಗರು ಕಮೆಂಟ್ಸ್ ಮಾಡಿರುವುದು ವಿಶೇಷ.

ಯಾಕ್ರೀ ಹೊರಗೆ ಬರ್ತಿರಿ? ಆತ್ಮಹತ್ಯೆ ಮಾಡ್ಕೊಂಡು ಸತ್ತೋಗ್ರೀ, ಭೂಮಿ ಭಾರ ಕಳೆಯುತ್ತೆ ಎಂದು ಪಬ್ಲಿಕ್ ಟಿವಿ‌ ಮುಖ್ಯಸ್ಥ ಎಚ್.ಆರ್.ರಂಗನಾಥ್ ಸಾಮಾನ್ಯ ಜನರಿಗೆ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ನಾವು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು, ನೀ ಚೇರ್ ನಿಂದ ಇಳಿದರೆ ಆಕಾಶ ಏನು ಉದುರಿ ಹೋಗಲ್ಲ.ಘನತೆ ಗೌರವ ಉಳಿಸಿಕೊಳ್ಳುವ ಕೆಲಸ ಮಾಡಿ ಅಂತ ಬಿಸಿಮುಟ್ಟಿಸಿದ್ದಾರೆ.
ಹದಿನಾಲ್ಕು ನಿಮಿಷಗಳ ಲೈವ್ ನಲ್ಲಿ ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಲೇ ಬಿಸಿ ಮುಟ್ಟಿಸಿದ್ದಾರೆ. ಇವರ ಮಾತಿಗೆ ಸಾವಿರಾರು ನೆಟ್ಟಿಗರು ಶಹಬ್ಬಾಶ್ ಹೇಳಿ ರಂಗನಾಥ್ ಮಾತನ್ನು ಟೀಕಿಸಿದ್ದಾರೆ.

 

ಯಾಕ್ರೀ ಬರ್ತೀರ? ಆತ್ಮಹತ್ಯೆ ಮಾಡ್ಕೊಂಡು ಸತ್ತೋಗಿ! ಭೂಮಿ ಬಾರ ಆದ್ರೂ ಕಮ್ಮಿ ಆಗುತ್ತೆ!

Posted by B R Bhaskar Prasad on Sunday, March 29, 2020

 

key words : public-tv.editor-ranganath-bhaskar-prasad-lock.down