ಪಾಳು ಬಿದ್ದ ಮನೆಯಲ್ಲೇ ಯುವಕನಿಗೆ ‘ ಸ್ವ-ಗೃಹನಿರ್ಬಂಧ’ ದ ಅಮಾನವೀಯ ಕೃತ್ಯ.

 

ಹಾಸನ, ಮಾ.30, 2020 : ( www.justkannada.in news ) ಮೂಲ ಸೌಕರ್ಯ‌ ಇಲ್ಲದ‌ ಮನೆಯಲ್ಲಿ ಯುವಕನಿಗೆ ಹೋಂ ಕ್ವಾರಂಟೈನ್. ಬಾಂಬೆಯಿಂದ‌ ಬಂದ ಯುವಕನಿಗೆ  ಒಂಟಿ ಮನೆಯಲ್ಲಿ ಸ್ವಯಂ ಬಂಧನ.

.ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಬಳಿಯ ಕಡವರಹಳ್ಳಿಯಲ್ಲಿ ಘಟನೆ. ಬಾಂಬೆಯಿಂದ ಬಂದಿರುವ ಯುವಕನನ್ನು ಮಾರ್ಚ್ 29 ಮನೆಗೆ ಬಿಟ್ಟಿರುವ ಆರೋಗ್ಯ ಇಲಾಖೆ . ಕನಿಷ್ಠ ಮೂಲಭೂತ ಸೌಲಭ್ಯವಿಲ್ಲದ ಮನೆಯಲ್ಲಿ ಯುವಕ ವನವಾಸ.

hasan-home-quarentine-no-infrastrutre-health

ತಂದೆ ತಾಯಿ ಇಲ್ಲದ ಬಾಲಕ ದುಡಿಮೆಗೆಂದು ಬಾಂಬೆಗೆ‌ ಹೋಗಿದ್ದ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಪಾಳು ಬಿದ್ದ ಮನೆಗೆ ಬಿಟ್ಟಿರುವ ಸ್ಥಳೀಯರು. ಒಂಟಿ ಮನೆಯಲ್ಲಿ‌‌ ಕರೆಂಟ್, ಶೌಚಾಲಯ ಸೇರಿ ಏನೂ ಇಲ್ಲ. ಯುವಕನನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವಂತೆ ಜನರ ಮನವಿ.

ಇದಕ್ಕೆ ಸ್ಪಂದಿಸದ ಆರೋಗ್ಯ ಇಲಾಖೆ ಅಧಿಕಾರಿಗಳು. ಸಮಾಜ ಕಲ್ಯಾಣ ‌ಇಲಾಖೆಗೆ‌ ವಹಿಸಿ  ಕೈ ತೊಳೆದುಕೊಂಡ ಆರೋಗ್ಯ ಇಲಾಖೆ.

 

key words : hasan-home-quarentine-no-infrastrutre-health