ಮೈಸೂರು,ಮೇ,28,2019(www.justkannada.in) ಕೇಂದ್ರ ಸಚಿವ ಸ್ಥಾನ ಸಿಗುವ ಕುರಿತು ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ನಾವು ಮಂತ್ರಿ ಆಗುವ ದೃಷ್ಟಿ ಇಂದ ರಾಜಕಾರಣದಕ್ಕೆ ಬಂದಿಲ್ಲ.. ಜನರು ನನಗೆ ಓಟ್ ಹಾಕಿರೋದು ಮಂತ್ರಿ ಆಗೋದಕ್ಕೆ ಅಲ್ಲ.. ನಾನು ಜನರ ಕೆಲಸ ಮಾಡೋದಕ್ಕೆ ಮಾತ್ರ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾನು ಮಾಡಿರೋ ತಂದಿರೋ ಕೆಲಸಗಳನ್ನ ಮುಂದುವರಿಸುತ್ತೇನೆ. 2024ಕ್ಕೆ ಯೋಚನೆ ಮಾಡುತ್ತೇನೆ. ಇನ್ನು ಮೋದಿಯವರ ಸಂಪುಟದಲ್ಲಿ ಇರುವುದೆ ನನಗೆ ಖುಷಿ. ನನಗಿಂತ ಶ್ರೀನಿವಾಸ್ ಪ್ರಸಾದ್ ಹಿರಿಯರಿದ್ದು ಅವರಿಗೆ ಮಂತ್ರಿ ಸಿಕ್ಕರೆ ನಾನು ಖುಷಿ ಪಡುತ್ತೇನೆ ಎಂದು ನುಡಿದರು.
ಕ್ಷೇತ್ರದ ಜನರ ಖುಣ ತೀರಿಸುವ ಕೆಲಸ ಮಾಡಬೇಕಾಗಿದೆ. ಮುಂದಿನ 5 ವರ್ಷಗಳಲ್ಲಿ ಏರ್ ಪೋರ್ಟ್ ಮೇಲ್ದರ್ಜೆ, 10 ಲೈನ್ ಹೈವೆ ಕಂಪ್ಲೀಟ್ ಮಾಡುತ್ತೇನೆ ಎಂದು ಹೇಳಿದ ಪ್ರತಾಪ್ ಸಿಂಹ, ಮೋದಿ ಜೊತೆ ಪಾರ್ಲಿಮೆಂಟಿನಲ್ಲಿ ಕುಳಿತುಕೊಳ್ಳೋ ಅವಕಾಶ ಸಿಕ್ಕಿದೆ..ನನಗು ಪತ್ರಕರ್ತನ ಸಂವೇದನೆ ಇದೆ, ಹೀಗಾಗಿ ಅಂತರಂಗದಲ್ಲಿ ನಾನು ಈಗಲೂ ಪತ್ರಕರ್ತ. ನಾನೊಬ್ಬ ಟಿಪಿಕಲ್ ರಾಜಕಾರಣಿ ಅಲ್ಲ. ನಾನು ಕೆಲಸ ಮಾಡೋಕಷ್ಟೇ ಇಲ್ಲಿ ಬಂದೆ. ಹಿರಿಯ ನಾಯಕರು ಕಟ್ಟಿರುವ ಹೆಮ್ಮರ ಬಿಜೆಪಿ. ಹೊಸದಾಗಿ ಗೆದ್ದವರ್ಯಾರು ಮಂತ್ರಿ ಪದವಿ ಬಗ್ಗೆ ಆಸೆ ಪಡಬಾರದು ಎಂದು ಕಿವಿಮಾತು ಹೇಳಿದರು.
ಈ ಬಾರಿ ವಿಶ್ವ ಯೋಗ ದಿನಕ್ಕೆ ಮೈಸೂರಿಗೆ ನರೇಂದ್ರ ಮೋದಿ ಅವರನ್ನ ಕರೆತರುವ ಆಸೆ ಇದೆ..
ಈ ಬಾರಿ ವಿಶ್ವ ಯೋಗ ದಿನಕ್ಕೆ ಮೈಸೂರಿಗೆ ನರೇಂದ್ರ ಮೋದಿ ಅವರನ್ನ ಕರೆತರುವ ಆಸೆ ಇದೆ. ನಾಳೆ ನಾನು ದೆಹಲಿಗೆ ಮೋದಿ ಅವರನ್ನ ಭೇಟಿ ಮಾಡುಲು ಹೋಗ್ತಿದ್ದೆನೆ. ಅವರನ್ನ ವಿಶ್ವ ಯೋಗದಿನಕ್ಕೆ ಮೈಸೂರಿಗೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ನಾನು ಈ ಮೋದಲೇ ಅವರಿಗೆ ಈ ವಿಚಾರವಾಗಿ ತಿಳಿಸಿದ್ದೆ. ಆದರೆ ಆ ಬಾರಿ ಆಗಲಿಲ್ಲ. ಅದ್ರೇ ಮುಂದಿನ ಐದು ವರ್ಷಗಳಲ್ಲಿ ಅವರನ್ನ ಕರೆತರುತ್ತೇನೆ ಎಂದು ಆಶ್ವಾಸನೆ ನೀಡಿದರು.
ತಮ್ಮ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ಮಹಾರಾಜರನ್ನ ಬಿಟ್ರೆ ಮೈಸೂರಿನಲ್ಲಿ ಅತಿಹೆಚ್ಚು ಅಂತರದಿಂದ ನಾನು ಗೆದ್ದಿದ್ದೇನೆ. 1.38, 637 ಮತಗಳ ಅಂತರದಿಂದ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇಶಾದ್ಯಂತ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಒಬ್ಬರೇ ಅಭ್ಯರ್ಥಿ. ಈ ಬಾರಿಯ ಚುನಾವಣೆಯಲ್ಲಿ ದೇಶಕ್ಕೆ ನರೇಂದ್ರ ಮೋದಿ ಅಭ್ಯರ್ಥಿಯಾಗಿದ್ದರು. ಈ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಸೋತ್ರೆ ಅದು ನನ್ನ ಸೋಲು ಎಂದು ಯಡಿಯೂರಪ್ಪ ಹೇಳಿದ್ದರು. ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪಗೆ ನಾನು ಅಬಾರಿಯಾಗಿರುತ್ತೇನೆ ಎಂದರು.
ಮತ ಹಾಕಿದ ಕಾಂಗ್ರೆಸ್, ಜೆಡಿಎಸ್ ನವರಿಗೂ ಕೃತಜ್ಞತೆ
ರಾಜಕಾರಣಿಗಳಿಗಿಂತ ಸಂಘಪರಿವಾರದವರಿಗೆ ಗ್ರೌಂಡ್ ರಿಪೋರ್ಟ್ ಹೆಚ್ಚು ಗೊತ್ತಿರುತ್ತದೆ. ಅವರು ಹೆಚ್ಚು ಜನರ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಈ ಬಾರಿ ಸಂಘಪರಿವಾರದವರು ಹೆಚ್ಚು ಸಹಕಾರ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಲ್ಲಿರೋ ಮೋದಿ ಅಭಿಮಾನಿಗಳು ನನಗೆ ಮತ ಹಾಕಿದ್ದಾರೆ. ಹೀಗಾಗಿ ನನಗೆ ಮತ ಹಾಕಿದ ಕಾಂಗ್ರೆಸ್, ಜೆಡಿಎಸ್ ನವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
Key words: What did MP Pratap Simha respond about Union minister post..
#Mysore #MPPratapSimha #Unionminister