ಬೆಂಗಳೂರು, ಏಪ್ರಿಲ್ 19, 2020 (www.justkannada.in):
ವಿಜಯೇಂದ್ರ ಸಾಂಸ್ಕೃತಿಕ ಬಳಗದ ವತಿಯಿಂದ ’ಕರೋನಾ ಕತ್ತಲೆಯಲ್ಲಿ ,ಆಟ ಪಾಠದ -ಬೆಳಕು ‘ಎನ್ನುವ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ಇಂದು ಚಾಲನೆ ನೀಡಲಾಯಿತು.
ನಗರದ ಮೇದರಗೇರಿಯಲ್ಲಿ ಮಕ್ಕಳಿಗೆ ಪುಸ್ತಕ -ಆಟಿಕೆಗಳನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚ್ಯಾ, ಕೊರೊನಾ ಅವಾಂತರ ತಡೆಗಟ್ಟಲು ಘೋಷಿಸಲಾಗಿರುವ ಲ್ಯಾಕ್ ಡೌನ್ ನಿಂದಾಗಿ ಲಕ್ಷಾಂತರ ಮಕ್ಕಳು ಸಾಮಾಜಿಕ ಸಂಪರ್ಕವಿಲ್ಲದೆ ಖಿನ್ನತೆ ಗೊಳಗಾಗುವ ಆತಂಕ ಎದುರಿಸುತ್ತಿರವ ಈ ಸಂದರ್ಭದಲ್ಲಿ ವಿಜಯೇಂದ್ರ ಸಾಂಸ್ಕೃತಿಕ ಬಳಗ ಮಾದರಿ ಎನ್ನವ ರೀತಿಯಲ್ಲಿ ಆನ್ ಲೈನ್ ಗಳಿಗೆ ಮಾರು ಹೋಗುತ್ತಿರುವ ಈ ಸನ್ನಿವೇಶದಲ್ಲಿ ಓದುವ ಅಭಿರುಚಿ ಬೆಳಸಿ , ಮನೆಯಲ್ಲೇ ದೇಶಿಯ ಆಟಗಳಲ್ಲಿ ಮಕ್ಕಳು ತೊಡಗಿಸಿ ಕೊಳ್ಳಲು ಪ್ರೇರಣೆ ನೀಡುತ್ತಿರುವ ಈ ಕಾರ್ಯಕ್ರಮ ಸರ್ಕಾರಕ್ಕೂ ಅನುಕರಣೀಯ ಎಂದರು.
ಇಂದು ಕರ್ನಾಟಕದಲ್ಲಿ ಮಕ್ಕಳಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಕ್ಕಳ ಅಭಿರುಚಿ ಹಾಗೂ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಯುಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿದ್ದಾರೆ. ನಮ್ಮ ಮಕ್ಕಳು ಆಧುನಿಕತೆಯೊಂದಿಗೆ ನಮ್ಮ ಸಂಸ್ಕೃತಿ ಆಚಾರ ,ವಿಚಾರಗಳನ್ನು ಬಹಳವಾಗಿ ಅರಿತುಕೊಳ್ಳಬೇಕಾಗಿದೆ ಹಾಗೆಯೇ ನಮ್ಮ ಪಠ್ಯಕ್ರಮದ ಸಂಸ್ಕೃತಿಯಿಂದ ದೂರಾಗಬಾರದು ಎನ್ನುವ ದೃಷ್ಟಿಯಿಂದ ಪ್ರಾರಂಭಗೊಂಡಿರುವ ಈ ಸದಭಿರುಚಿಯ ಈ ಕಾರ್ಯಕ್ರಮ ಮಕ್ಕಳಲ್ಲಿ ಸದ್ಯ ತುಂಬಿ ಹೋಗಿರುವ ಕೊರೊನಾ ಆತಂಕದ ಕತ್ತಲಿನಿಂದ ಬೆಳಕು ಕಾಣುವ ಆತ್ಮ ವಿಶ್ವಾಸ ತುಂಬಲಿ ಎಂದು ಹಾರೈಸಿದರು. ಇಂಥಾ ಶ್ರೇಷ್ಠ ಕಾರ್ಯಕ್ರಮದ ರೂವಾರಿಗಳಾಗಿರುವ ಶಿಕ್ಷಣ ತಜ್ಞರೂ ಆದ ಬಿಜೆಪಿ ಮುಖಂಡ ರಘು ಕೌಟಿಲ್ಯ ರವರ ಕಳಕಳಿಯನ್ನು ನಂದೀಶ್ ಹಂಚ್ಯಾ ಶ್ಲಾ,ಘಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಆರ್ .ರಘು( ಕೌಟಿಲ್ಯ)ರವರು ಮಾತನಾಡಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಲ್ಲಿ ಈ ಕಾರ್ಯಕ್ರಮ ನಿರಂತರ ನಡೆಸಲು ಉದ್ದೇಶಿಸಲಾಗಿದ್ದು ರಾಜ್ಯಾದ್ಯಂತ ಅಶಕ್ತರಿಗಾಗಿ ಔಷದಿ-ಆಹಾರ ವಿತರಣಾ ಕಾರ್ಯಕ್ರಮದ ನೇತೃತ್ವ ವಹಿಸಿರುವ ವಿಜಯೇಂದ್ರರವರು ಶಿಕ್ಷಣ ಹಾಗೂ ಮಕ್ಕಳ ಬಗ್ಗೆಯೂ ವಿಶೇಷ ಕಾಳಜಿಯನ್ನಿಟ್ಟು ಕೊಂಡಿದ್ದಾರೆ .ಈ ನಿಟ್ಟಿ ನಲ್ಲಿ ಅವರು ನೀಡಿದ ಮಾರ್ಗ ದರ್ಶನದ ಪ್ರೇರಣೆಯೇ ಈ ಕಾರ್ಯಕ್ರಮದ ರೂಪಿಸಲು ಕಾರಣವಾಗಿದೆ ಎಂದರು. ಕೊರೊನಾ ಲಾಕ್ ಡೌನ್ ನಿಂದ ಹೆಚ್ಚಿನ ಮಕ್ಕಳು ಮನೆಯಲ್ಲೇ ಕುಳಿತು ಮಂಕಾಗಿ ಹೋಗಿದ್ದಾರೆ .ಅವರುಗಳು ಕೇವಲ ಟಿವಿ ಹಾಗೂ ಮೊಬೈಲ್ ಗಳಮೇಲೆ ಅವಲಂಬಿತರಾಗದೆ
ಅತ್ಯುತ್ತಮವಾದ ನಮ್ಮ ಸಂಸ್ಕೃತಿ ಪರಂಪರೆ ಇತಿಹಾಸ ಹಾಗೂ ಪಠ್ಯಕ್ರಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಹ ನೀಡಲಾಗಿದ್ದು ವಿಷಯದ ಬಗ್ಗೆ ಆಸಕ್ತಿ ಉಳ್ಳವರು ಓದಬಹುದಾಗಿದೆ
ಜೊತೆಜೊತೆಗೆ ಕಾಲಕಳೆಯಲು ಚೆಸ್ ಕೇರಂ ಚಿತ್ರಕಲೆಗಳಂತಹ ಅಭಿರುಚಿಯನ್ನು ಬೆಳೆಸಿಕೊಂಡು ಮನೆಯಲ್ಲಿ ಮಕ್ಕಳು ಬಿಡುವಿನ ಸಮಯವನ್ನು ಉಪಯುಕ್ತವಾಗಿ ಕಳೆಯಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದು ನಿರಂತರವಾಗಿರಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್ , ಆಲನಹಳ್ಳಿ ಮಹದೇವ ಸ್ವಾಮಿ,
ವಕೀಲ ಮಾರ್ಬಳ್ಳಿ ಮೂರ್ತಿ,ಜಿ.ಗೋಪಾಲ
ವಿಕ್ರಮ ಅಯ್ಯಂಗಾರ್, ಅಪೂರ್ವ ಸುರೇಶ್, ಸುಚೀಂದ್ರ, ಶ್ರೀನಿವಾಸ್ ಪ್ರಸಾದ್ , ಇತರರು ಉಪಸ್ಥಿತರಿದ್ದರು