ಬಸವ ಜಯಂತಿ : ಸಾಮಾಜಿಕ ಅಂತರ ಮರೆತ ಜನಪ್ರತಿನಿಧಿಗಳು, ಅಧಿಕಾರಿಗಳು…!

 

ಮೈಸೂರು, ಏ.26, 2020 : (www.justkannada.in news) : ಜಿಲ್ಲಾಡಳಿತದ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನಪ್ರತಿನಿಧಿಗಳ, ಅಧಿಕಾರಿಗಳ ನಡೆ ಟೀಕೆಗೆ ಗ್ರಾಸವಾಗಿದೆ.

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬಸವಜಯಂತಿ ಅಳವಾಗಿ ನಗರದ ಗನ್ ಹೌಸ್ ವೃತ್ತದಲ್ಲಿನ ಬಸವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್, ಶಾಸಕರಾದ ಎಸ್‌.ಎ. ರಾಮದಾಸ್, ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಸೇರಿದಂತೆ ಇತರೆ ಹಲವಾರು ಮಂದಿ ಭಾಗವಹಿಸಿದ್ದರು.

 mysore- basava.jayanthi-no-social.distance-somashekar

ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಸೋಷಿಯಲ್ ಡಿಸ್ಟೆನ್ಸ್ ಅನ್ನು ಮಾತ್ರ ಯಾರು ಕಾಯ್ದುಕೊಂಡಿರಲಿಲ್ಲ ಎಂಬುದು ವಿಷಾದನೀಯ. ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ನಡೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಎಡೆಮಾಡಿದೆ.
ಬಸವ ಜಯಂತಿ ಸಮಾರಂಭದ ಫೋಟೋ ಹಾಗೂ ವಿಡಿಯೋ ಗಮನಿಸಿದ ಸಾರ್ವಜನಿಕರು ಸಿಟ್ಟಿಗೆದ್ದಿದ್ದಾರೆ. ಜನಸಾಮಾನ್ಯರಿಗೊಂದು ಕಾನೂನು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮತ್ತೊಂದು ಕಾನೂನೇ. ‘ ವೇದಾಂತ ಹೇಳೋಕೆ, ಬಸನೆಕಾಯಿ ತಿನ್ನೋಕೆ ‘ ಎಂದು ಪ್ರಶ್ನಿಸುತ್ತಿದ್ದಾರೆ.

 mysore- basava.jayanthi-no-social.distance-somashekar

key words : mysore- basava.jayanthi-no-social.distance-somashekar