ಬೆಂಗಳೂರು, ಮೇ 03, 2020 (www.justkannada.in): ವಲಸೆ ಕಾರ್ಮಿಕರಿಗಾಗಿ ಉಚಿತವಾಗಿ 3 ದಿನ ಕೆಎಸ್‌ಆರ್ಟಿಸಿ ಬಸ್ ಓಡಿಸಲು ಅವಕಾಶ ಮಾಡಿಕೊಟ್ಟಿದೆ.
ದುಬಾರಿ ಬಸ್ ದರದಿಂದಾಗಿ ಕೆಲಸವಿಲ್ಲದ ಕೂಲಿ ಕಾರ್ಮಿಕರು ಪರದಾಡುವಂತಾಗಿತ್ತು. ಇನ್ನು ನಿನ್ನೆ kpcc ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಮೆಜೆಸ್ಟಿಕ್ ಗೆ ಹೋಗಿ ಅಲ್ಲಿದ್ದ ವಲಸೆ ಕಾರ್ಮಿಕರ ಜೊತೆ ಮಾತನಾಡಿದ್ದರು.
ನಂತರ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಹಾರಿಹಾಯ್ದಿದ್ದರು. ಭಿಕ್ಷೆ ಎತ್ತಿ ಬೇಕಾದರೂ ನಾನು ಹಣವನ್ನು ನೀಡುತ್ತೇನೆ. ಕಾರ್ಮಿಕರನ್ನು ಅವರ ಊರುಗಳಿಗೆ ಹೋಗುವುದಕ್ಕೆ ಅನುವು ಮಾಡಿಕೊಡಿ ಎಂದು ಆಗ್ರಹಿಸಿದ್ದರು.
ಜತೆಗೆ ಕೆಪಿಸಿಸಿಯಿಂದ ಒಂದು ಕೋಟಿ ರೂ.ಗಳನ್ನು ಕೆಎಸ್ ಎಸ್ಆರ್ ಟಿ ಎಂಡಿಗೆ ನೀಡಲಾಗಿದೆ. ಇದೀಗ ರಾಜ್ಯ ಸರ್ಕಾರ 3 ದಿನಗಳ ಕಾಲ ಉಚಿತವಾಗಿ ಕೆಎಸ್‌ಆರ್ಟಿಸಿ ಬಸ್ ಓಡಿಸಲು ಆದೇಶಿಸಿದೆ. ಅಲ್ಲದೆ ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡುತ್ತಿದೆ.