ಮೈಸೂರು,ಮೇ,29,2019(www.justkannada.in): ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿರುವ ಹಿನ್ನೆಲೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಪರ ಹೋರಾಟ ಗಾರ ವಾಟಳ್ ನಾಗರಾಜ್, ಒಂದು ವೇಳೆ ನೀರು ಬಿಟ್ರೆ ಸಮಗ್ರ ಕನ್ನಡ ಸಂಘದಿಂದ ಕರ್ನಾಟಕ ಬಂದ್ ಮಾಡ್ತಿವಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ವಿರೋಧ ಹಾಗೂ ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ ಭೂಮಿ ನೀಡುತ್ತಿರುವುದನ್ನು ವಿರೋಧಿಸಿ ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ರಸ್ತೆಯಲ್ಲಿ ಮಲಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮೊದಲನೇಯದಾಗಿ ನಾನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒಪ್ಪುತ್ತಿಲ್ಲ. ತಮಿಳುನಾಡು ಪ್ರಾಧಿಕಾರ ಬೇಕು ಅಂತ ಹೇಳಿತ್ತು. ಆದರೆ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರದ ವಿರೋಧ ಕೂಡ ಇತ್ತು. ಆದ್ರೆ ಇದೀಗ ರಾಜ್ಯ ಸರ್ಕಾರ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿ ಅದನ್ನು ಒಪ್ಪಿದೆ. ಯಾವುದೇ ಕಾರಣಕ್ಕೂ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಒಪ್ಪಬಾರದು. ಪ್ರಾಧಿಕಾರಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.
ತಮಿಳುನಾಡಿಗೆ ಒಂದು ಹನಿ ನೀರು ಕೊಟ್ರೆ ನಮ್ಮ ವಿರೋಧವಿದೆ. ನೀರು ಕೊಟ್ರೆ ಬೆಂಗಳೂರಿಗೆ ನೀರಿಲ್ಲ, ರೈತರಿಗೆ ನೀರಿಲ್ಲದ ಪರಿಸ್ಥಿತಿ ಉಂಟಾಗುತ್ತೆ. ಒಂದು ವೇಳೆ ನೀರು ಬಿಟ್ರೆ ಸಮಗ್ರ ಕನ್ನಡ ಸಂಘದಿಂದ ಕರ್ನಾಟಕ ಬಂದ್ ಮಾಡ್ತಿವಿ. ನಾನು ಕೆ ಆರ್ ಎಸ್ ನಲ್ಲಿ ಜೂನ್ 3 ರಂದು ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಸಚಿವ ಸಂಪುಟದಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ ನೀಡಲು ಸಮ್ಮತಿ ನೀಡಿದ ಹಿನ್ನೆಲೆ. ರೈತರ ಭೂಮಿ ಕಸಿದು ರಿಯಲ್ ಎಸ್ಟೇಟ್ ಸಂಸ್ಥೆಗೆ ನೀಡುತ್ತಿದ್ದಾರೆ. ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ ಭ್ರಷ್ಟಾಚಾರದ ಅವ್ಯವಹಾರ ನಡೆಸುತ್ತಿದೆ. ೩೬೬೦ ಕ್ಕೂ ಹೆಚ್ಚಿನ ಎಕರೆ ಭೂಮಿಯನ್ನು ೧.೪೫ ಲಕ್ಷಗಳಿಗೆ ನೀಡುವ ಮೂಲಕ ರಾಜ್ಯಕ್ಕೆ ಲಕ್ಷ ಕೋಟಿಗೆ ಹಣ ನಷ್ಟ ವಾಗಲಿದೆ. ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಆದೇಶವನ್ನು ಹಿಂಪಡೆಯ ಬೇಕು. ರೈತರ ಹಿತವನ್ನು ರಾಜ್ಯ ಸರ್ಕಾರ ಕಾಯಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
Key words: if give water to Tamil Nadu. We will call Karnataka Bandh – Vatal Nagaraj warn to Government
#Caveridispute #vatalnagaraj #warn #Government