ನವದೆಹಲಿ, ಮೇ 10, 2020 (www.justkannada.in): ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಐವರು ಪೈಲಟ್ಗಳಿಗೆ ಕೋವಿಡ್-19 ಸೋಂಕು ತಗುಲಿದೆ. ಇವರೆಲ್ಲ ಮುಂಬೈಯವರಾಗಿದ್ದಾರೆ.
ಪೈಲಟ್ಗಳಿಗೆ ಸೋಂಕು ತಗುಲಿರುವುದು ವಿಮಾನ ಹಾರಾಟ ನಡೆಸುವುದಕ್ಕೂ 72 ಗಂಟೆಗಳ ಮೊದಲು ನಡೆಸಿದ ಕೋವಿಡ್-19 ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇವರ್ಯಾರಲ್ಲೂ ಸೋಂಕಿನ ಲಕ್ಷಣಗಳು ಇರಲಿಲ್ಲ.
ಇವರು ಸರಕುಸಾಗಣೆ ವಿಮಾನವನ್ನು ಚೀನಾಕ್ಕೆ ಚಲಾಯಿಸಿದ್ದರು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.