ಬೆಂಗಳೂರು, ಮೇ 17, 2020 (www.justkannada.in): ‘ಆತ್ಮ ನಿರ್ಭರ್ ಭಾರತ್’ ಪ್ಯಾಕೇಜ್ 20 ಲಕ್ಷ ಕೋಟಿ ರೂ. ಕೊನೆ ಕಂತಿನ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನೀಡಲಿದ್ದಾರೆ.
ಶನಿವಾರ ಕಲ್ಲಿದ್ದಲು ವಲಯದಲ್ಲಿ ಖಾಸಗಿ ವಲಯ ಭಾಗವಹಿಸುವುದರಿಂದ 50 ಸಾವಿರ ಕೋಟಿ ರುಪಾಯಿ ಮೂಲಸೌಲರ್ಯ ಅಭಿವೃದ್ಧಿ ಆಗುತ್ತದೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕತೆ ಹಾಗೂ ಪಾರದರ್ಶಕತೆ ತರುತ್ತದೆ ಎಂದಿದ್ದರು.
ಇನ್ನು ಶುಕ್ರವಾರ 1 ಲಕ್ಷ ಕೋಟಿ ರುಪಾಯಿ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆ, ಕಿರು ಆಹಾರ ಸಂಸ್ಥೆಗಳ ಸ್ಥಾಪನೆಗೆ 10 ಸಾವಿರ ಕೋಟಿ ರುಪಾಯಿ ಘೋಷಣೆ ಮಾಡಿದ್ದರು.
ಇದರ ಜತೆಗೆ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಪ್ರಸ್ತಾವ ಮಾಡಿದ್ದರು. ಆ ಮೂಲಕ ರೈತರಿಗೆ ಉತ್ತಮ ಬೆಲೆ ದೊರೆಯಬೇಕು ಹಾಗೂ ಸರಕು ಪೂರೈಕೆಗೆ ಯಾವುದೇ ಮಿತಿ ವಿಧಿಸಬಾರದು ಎಂಬ ಉದ್ದೇಶ ಇಟ್ಟುಕೊಳ್ಳಲಾಗಿದೆ.