ಮೈಸೂರು, ಮೇ 21, 2020 (www.justkannada.in): ಇನ್ಮೇಲೆ ಮೋದಿ ಏನೇ ಯೋಜನೆ ಶುರು ಮಾಡ್ಬೇಕು ಅಂದ್ರೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನ ಕೇಳಿ ಮಾಡೊಕೆ ಹೇಳ್ತಿನಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳನ್ನು ಟೀಕಿಸುವ ಕಾಂಗ್ರೆಸ್ ಗೆ ಈಶ್ವರಪ್ಪ ತಿರುಗೇಟು ನೀಡಿದ್ದು, ಅವರು ವಿರೋಧ ಪಕ್ಷದಲ್ಲಿರಲು ಅಯೋಗ್ಯರು. ಇದೆಲ್ಲಾ ಬೋಗಸ್ ವಿರೋಧ ಪಕ್ಷದ ನಾಯಕರ ಹೇಳಿಕೆಗಳು ಎಂದು ಟೀಕಿಸಿದ್ದಾರೆ.
ಮೈಸೂರಿನ ಸುತ್ತೂರು ಮಠದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಈಶ್ವರಪ್ಪ, ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಗೆ 40ಸಾವಿರ ಕೋಟಿ ಕೊಟ್ಟಿದೆ. ಇದ್ರಿಂದ ಮನೆರೆಗಾ ಯೋಜನೆಗೆ ಹೆಚ್ಚು ಒತ್ತು ಸಿಕ್ಕಂತಾಗಿದೆ. ನಿನ್ನೆ ಒಂದೇ ದಿನ 9ಲಕ್ಷಕ್ಕೂ ಅಧಿಕಜನ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ವರ್ಷದಲ್ಲಿ ನೂರು ದಿನಗಳ ಕೆಲಸ ನಡೆಯುತ್ತಿತ್ತು. ಅದು ಇನ್ಮುಂದೆ ನೂರೈವತ್ತು ದಿನಗಳಿಗೆ ಏರಿಕೆ ಯಾಗುತ್ತೆ. ಹೆಚ್ಚಾಗಿ ಅಂತರ್ಜಲ ಹೆಚ್ಚಿಸುವ ಕೆಲಸಗಳು ನಡೆಯುತ್ತಿದೆ. ವಿರೋಧ ಪಕ್ಷಗಳು ಈ ವಿಚಾರದಲ್ಲಿ ಟೀಕೆ ಮಾಡಲ್ಲ, ಮಾಡಲ್ಲ ಅಂತಾನೆ ರಾಜಕಾರಣ ಮಾಡ್ತಿದ್ದಾರೆ. ಕೇವಲ ಮಾಡೋದೆ ವಿರೋಧ ಪಕ್ಷದ ಕೆಲಸ ಅನ್ನೊದು ಸರಿಯಲ್ಲ. ಒಬ್ಬ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅನುಮತಿ ಇಲ್ಲದೆ ಪ್ರತಿಭಟನೆ ಮಾಡ್ತಾರೆ. ಸದನದ ಒಳಗಡೆ ಎಲ್ಲರೀತಿಯ ಬೆಂಬಲ ನೀಡ್ತಿವಿ ಅಂತ ಹೇಳಿ ಹೊರಗಡೆ ಬಂದು ಪ್ರತಿಭಟನೆಯನ್ನ ಮಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.