ಮೈಸೂರು, ಮೇ 21, 2020 (www.justkannada.in): ಮಂಡ್ಯಕ್ಕೆ ಮಾತ್ರವಲ್ಲ, ಮೈಸೂರಿಗೂ ಮುಂಬೈ ಕೊರೊನಾ ಬಾಂಬ್ ಭೀತಿ ಎದುರಾಗಿದೆ.
ಮಹಾರಾಷ್ಟ್ರದಿಂದ ಬರಬೇಕಿದೆ ಬರೋಬ್ಬರಿ 3500ಕ್ಕೂ ಹೆಚ್ಚು ವಲಸಿಗರು. ಕೂಲಿ, ವಿವಿಧ ಕೆಲಸಗಳಿಗಾಗಿ ಮುಂಬೈನಲ್ಲಿ ನೆಲೆಸಿರುವ ಮೈಸೂರಿಗರು. ಈಗಾಗಲೇ 300ಕ್ಕೂ ಹೆಚ್ಚು ವಲಸಿಗರು ಆಗಮಿಸಿದ್ದಾರೆ. ಹೀಗಾಗಿ ಮೈಸೂರಿಗರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಿದೆ.
ಸಾವಿರಾರು ಸಂಖ್ಯೆಯಲ್ಲಿ ಮುಂಬೈನಿಂದ ಬರಲಿರುವ ವಲಸಿಗರು. ಹೀಗಾಗಿ ಮುಂಬೈನಿಂದ ಬಂದರೆ ಪಾಸಿಟಿವ್ ಕಟ್ಟಿಟ್ಟಬುತ್ತಿ. ಮಂಡ್ಯ ಮಾದರಿಯಲ್ಲೇ ಏರಿಕೆ ಆಗಬಹುದು ಕೊರೊನಾ ಕೇಸ್ಗಳು ಎಂಬ ಭೀತಿ ಎದುರಾಗಿದೆ.
ಮುಂದಿನ ದಿನಗಳಲ್ಲಿ ಪಾಸಿಟಿವ್ ಕೇಸ್ಗಳು ಬಂದೇ ಬರುತ್ತವೆ. ಈಗಿನ ಮಟ್ಟಕ್ಕೆ ನಾವು ಖುಷಿಪಡಬಹುದು. ಆದ್ರೆ ಭವಿಷ್ಯದಲ್ಲೂ ಕರೊನಾ ನಿರ್ವಹಣೆ ಸವಾಲು ಇದ್ದೇ ಇದೆ ಎಂದು ಮೈಸೂರು ಎಸ್ಪಿ ಸಿ.ಬಿ.ರಿಷ್ಯಂತ್ ಭವಿಷ್ಯ ಹಾಗೂ ಡಿಸಿಪಿ ಡಾ.ಪ್ರಕಾಶ್ಗೌಡ ಸುಳಿವು ನೀಡಿದ್ದಾರೆ.