ಬೆಂಗಳೂರು, ಮೇ 26, 2020 (www.justkannada.in): ಪಡಿತರ ಚೀಟಿ ಇಲ್ಲದವರಿಗೆ ಕೇಂದ್ರ ಸರ್ಕಾರದ ವತಿಯಿಂದ ರೇಷನ್ ವಿತರಣೆ ಮಾಡಲಾಗುತ್ತಿದೆ.
ಕಟ್ಟ ಕಡೆಯ ಮನುಷ್ಯನಿಗೂ ಹಾಗೂ ಪ್ರತಿಯೊಬ್ಬರಿಗೂ ಆಹಾರ ತಲುಪಬೇಕು ಅನ್ನೋದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಚಿಂತನೆಯಾಗಿತ್ತು. ಇವತ್ತು ಇದು ಯಶಸ್ವಿಯಾಗಿ ಪಲಿಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯನವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ನೀಡುವಂತ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು. ನಮ್ಮ ರಾಜ್ಯದಲ್ಲಿ ಇವತ್ತಿನಿಂದ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ವಿತರಣೆ ಮಾಡುವಂತಹ ಕಾರ್ಯ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಇಂದು ಆಹಾರ ಸಚಿವರು ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿ ನರೇಂದ್ರಮೋದಿಯವರು, ಕೇಂದ್ರ ಆಹಾರ ಸಚಿವರು, ಹಾಗೂ ನಮ್ಮ ನಾಯಕಾರದ ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶದ ಮೇರೆಗೆ, ಪಡಿತರ ಚೀಟಿ ಇಲ್ಲದವರಿಗೆ ಎರಡು ತಿಂಗಳು 10 ಕೆಜಿ ಅಕ್ಕಿ ಕೊಡುವಂತ ಕಾರ್ಯ ಇವತ್ತು ಪ್ರಾರಂಭವಾಗಿದೆ. ಹಾಗಾಗಿ ನಾನು ಇವತ್ತು ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿ ನ್ಯಾಯಬೆಲೆ ಅಂಗಡಿಗಳು ತೆರೆದಿದ್ಯಾ, ರೇಷನ್ ವಿತರಣೆ ಸರಿಯಾಗಿ ನಡೆಯುತ್ತಿದ್ಯಾ ಎಂದು ಪರಿಶೀಲನೆ ನಡೆಸಿದ್ದೇನೆ. ಕಟ್ಟಕಡೆಯ ಮನುಷ್ಯನಿಗೂ ಆಹಾರ ಸಿಗಬೇಕು ಅನ್ನೋದು ನಮ್ಮ ಸರ್ಕಾರದ ಮಹತ್ವದ ಗುರಿಯಾಗಿತ್ತು. ಅದು ಇವತ್ತು ನೆರವೇರಿದೆ.
ಇನ್ನು ಈ ತಿಂಗಳು ಪ್ರತಿಯೊಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ, ಹಾಗೇ ಮುಂದಿನ ತಿಂಗಳು 1ನೇ ತಾರೀಖಿನಿಂದ ಪ್ರತಿಯೊಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ , ಒಂದು ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳು ಕೊಡಲಾಗುತ್ತೆ. ಈ ಯೋಜನೆ ಯಾರ ಬಳಿ ರೇಷನ್ ಕಾರ್ಡ್ ಇಲ್ಲ ಅವರಿಗೆಲ್ಲಾ ಅನ್ವಯವಾಗಲಿದ್ದು, ಆಧರ್ ಕಾರ್ಡ್ ತೋರಿಸಿ ವಲಸಿಗರು, ಕೂಲಿ ಕಾರ್ಮಿಕರು, ಇಲ್ಲಿ ಇರುವಂಥವರು, ಕೂಡ ರೇಷನ್ ಪಡೆಯಬಹುದು ಎಂದು ಸಚಿವರು ತಿಳಿಸಿದರು.