ಕೊರೊನಾ ಸಂಕಷ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ : ಒಂದು ಕೊಠಡಿಯಲ್ಲಿ ಎಷ್ಟು ವಿದ್ಯಾರ್ಥಿಗಳು ಗೊತ್ತ..?

 

ಮೈಸೂರು, ಮೇ 26, 2020 : (www.justkannada.in news) ಕೊರೊನಾ ತಡೆಗಟ್ಟುವ ಜವಾಬ್ದಾರಿಯ ನಡುವೆಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಪರೀಕ್ಷಾ ಕೊಠಡಿಗೆ ಬರುವ ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ. ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮಕ್ಕೆ ಸೂಚನೆ.

ಜೂನ್ 25 ರಿಂದ ಆರಂಭವಾಗುವ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಮೈಸೂರು ಡಿಡಿಪಿಐ ಪಾಂಡುರಂಗ ಅವರು ಮಾಧ್ಯಮಗಳಿಗೆ ನೀಡಿದ ವಿವರ ಹೀಗಿದೆ..

karnataka-mysore-SSLC-exams-20-students-per.class-DDPI

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ಮೀಸಲು. ಪರೀಕ್ಷೆ ಆರಂಭಕ್ಕೋ ಅರ್ಧ ತಾಸು ಮುಂಚೆ ಬರುವಂತೆ ಸೂಚನೆ. ಪ್ರತಿ ಕೇಂದ್ರಗಳಲ್ಲಿ ಓರ್ವ ಮುಖ್ಯ ಮೇಲ್ವಿಚಾರಕ ನೇಮಕ. ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳು. ಕೊರೊನಾ ನಡುವೆ ಪರೀಕ್ಷೆ ಬರೆಯಲಿರುವ 36 ಸಾವಿರ ವಿದ್ಯಾರ್ಥಿಗಳು. ಈಗಿನಿಂದಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರಗಳ ಪರಿಶೀಲನೆ.

ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ, ಕೊರೊನಾದಿಂದ ಜೂನ್ನಲ್ಲಿ ನಡೆಯಲಿದೆ. ಇದು ವಿದ್ಯಾರ್ಥಿಗಳಿಗೆ ಓದಲು ಹೆಚ್ಚು ಸಮಯ ಸಿಕ್ಕಿದಂತಾಗಿದೆ. ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಸೇರಿದಂತೆ ರೇಡಿಯೋ ಕ್ಲಾಸ್ಗಳನ್ನ ಮಾಡಿದ್ದೆವೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಮೈಸೂರು ಉತ್ತಮ ಸ್ಥಾನ ಬರುವ ನಿರೀಕ್ಷೆ ಇದೆ.

 

key words : karnataka-mysore-SSLC-exams-20-students-per.class-DDPI