BREAKING ‘ NEWS’ – ಕ್ಯಾಮರಾಮನ್ ಗೆ ಕರೋನಾ ಪಾಸಿಟಿವ್ : ಈತನ ಸಂಪರ್ಕಕ್ಕೆ ಬಂದವರ ವಿವರ ನೀಡುವಂತೆ ಸೂಚನೆ.

 

ಬೆಂಗಳೂರು, ಮೇ 28, 2020 : (www.justkannada.in news) : ಬೆಂಗಳೂರು ದೂರದರ್ಶನ ಕೇಂದ್ರದ ಕ್ಯಾಮರಾಮನ್ ಒಬ್ಬರಿಗೆ ಕರೋನ ಪಾಸಿಟಿವ್ ಕಂಡು ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಂಡಿಗಢದ ದೂರದರ್ಶನ ಕೇಂದ್ರದಲ್ಲಿ ಫ್ಲೋರ್ ಕ್ಯಾಮರಾಮನ್ ಆಗಿರುವ ಸುರೇಶ್ ಎನ್ನುವವರಿಗೆ ಈಗ ಕರೋನಾ ಪಾಸಿಟಿವ್ ಕಂಡು ಬಂದಿರುವುದು.

ಕ್ಯಾಮರಾಮನ್ ಸುರೇಶ್, ಮೇ 23 ರ ರಾತ್ರಿ 9 ಗಂಟೆಗೆ ಬೆಂಗಳೂರು ದೂರದರ್ಶನ ‘ಚಂದನ’ ವಾಹಿನಿಯಲ್ಲಿ ಪ್ರಸಾರವಾದ ನ್ಯೂಸ್ ವೇಳೆ ಕರ್ತವ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದಿರುವ ನ್ಯೂಸ್ ಆ್ಯಂಕರ್ ಸೇರಿದಂತೆ ನ್ಯೂಸ್ ರೂಮ್ ನ ಇತರೆ ಸಿಬ್ಬಂದಿಗಳಿಗೂ ಇದೀಗ ಕರೋನ ಸಂಕಟ ಎದುರಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅಡಿಷನಲ್ ಡೈರಕ್ಟರ್ ಜನರಲ್ ಡಾ. ರಾಜ್ ಕುಮಾರ್ ಉಪಾಧ್ಯಾಯ, ಬೆಂಗಳೂರು ದೂರದರ್ಶನ ಕೇಂದ್ರದ ಮುಖ್ಯಸ್ಥರಿಗೆ ಮೇ 27 ರಂದು ಪತ್ರ ಬರೆದಿದ್ದಾರೆ. ಕ್ಯಾಮರಾಮನ್ ಸುರೇಶ್ ಜತೆಗೆ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಮಾಹಿತಿ ಒದಗಿಸುವಂತೆ ಸೂಚಿಸಿದ್ದಾರೆ.

ಈ ಪತ್ರದ ಪ್ರತಿ ಜಸ್ಟ್ ಕನ್ನಡ ಡಾಟ್ ಇನ್ ಗೆ ಲಭಿಸಿದ್ದು, ಪತ್ರದಲ್ಲಿ ಸೂಚಿಸಿರುವುದು ಹೀಗಿದೆ….

Chandigarh DDK cameraman suresh found corona positive at bengaluru.

ಮೇ 13 ರಿಂದ 25 ರ ತನಕ ಕ್ಯಾಮರಾಮನ್ ಸುರೇಶ್ ಜತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಕ್ಕೆ ಬಂದಿರುವ ಎಲ್ಲರ ವಿವರಗಳನ್ನು ಮೇ 28 ರೊಳಗೆ ನೀಡುವಂತೆ ಸೂಚಿಸಿರುವ ಎಡಿಜಿ ಡಾ. ರಾಜ್ ಕುಮಾರ್ ಉಪಾಧ್ಯಾಯ, ಯಾರಾದರು ಈ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದೆ ಆದರೆ ಅವರ ವಿರುದ್ಧ ಪ್ರಕೃತಿ ವಿಪತ್ತು ಕಾಯ್ದೆ 2005 ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಸಹ ಎಚ್ಚರಿಸಿದ್ದಾರೆ.

ಕೋವಿಡ್ 19 ನಿಯಂತ್ರಣ ಸಂಬಂಧ ಮೇ 18 ರಂದು ಕೇಂದ್ರ ಸರಕಾರ ಜಾರಿಗೆ ತಂದಿರುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಕ್ವಾಟಂಟೈನ್ ಅಗತ್ಯವಿದ್ದಲ್ಲಿ ದೂರದರ್ಶನದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಅದನ್ನು ಪಾಲಿಸಬೇಕು ಎಂದು ಪತ್ರದಲ್ಲಿ ತಿಳುವಳಿಕೆ ನೀಡಲಾಗಿದೆ.

 

key words : Chandigarh DDK cameraman suresh found corona positive at bengaluru.

 

ENGLISH SUMMARY :

Chandigarh DDK cameraman suresh found corona positive at bengaluru.

Chandigarh DDK cameraman suresh found corona positive at bengaluru.

suresh, cameraman, DDK, Chandigarh, who was on duty at DDK, Bengaluru has been tested corona positive and has been admitted to the hospital. it is learnt that he performed duty at DDK, Bengaluru on May 23 for 9 PM news bulletin
it is directed that officials who came in direct contact with cameraman suresh or closley interacted with him from May 13 to 25 should give details of their interaction.
if any official is found to be hiding the facts about interactions with suresh, such persons will face strict action as per disaster management act 2005.