ಬೆಂಗಳೂರು,ಮೇ,28,2020(www.justkannada.in): 65 ವರ್ಷ ಮೇಲ್ಪಟ್ಟವರಿಗೆ ಸಂಚಾರ ನಿರ್ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ನೀಡಿದೆ.
65 ವರ್ಷ ಮೇಲ್ಪಟ್ಟವರಿಗೆ ಸಂಚಾರ ನಿರ್ಬಂಧ ವಿಧಿಸಿರುವುದನ್ನ ಪ್ರಶ್ನಿಸಿ ಜಯದೇವ್ ಎಂಬುವವರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಜೂನ್ 4ರೊಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ರಮೇಶ್ ಪುತ್ತಿಗೆ, 65 ವರ್ಷ ಮೇಲ್ಪಟ್ಟವರಿಗೆ ಸಂಚಾರ ನಿರ್ಬಂಧಿಸಲಾಗಿದೆ. ರಾಜ್ಯ ಸರ್ಕಾರದ ಈ ಕ್ರಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಜೈಲಿನಲ್ಲೂ ಒಂಟಿ ಸೆರೆವಾಸಕ್ಕೆ ಅವಕಾಶವಿಲ್ಲ. ಆದರೆ ಹಿರಿಯ ನಾಗರೀಕರು ಮನೆಯಲ್ಲೇ ಇರಬೇಕೆಂದು ನಿರ್ಬಂಧ ವಿಧಿಸಿರುವುದು ತೊಂದರೆಯಾಗುತ್ತದೆ. ಹಿರಿಯ ನಾಗರೀಕರಿಗೆ ಸಂಚರಿಸಿರುವ ಸ್ವಾತಂತ್ರವಿದೆ. ಹೀಗಾಗಿ ಸರ್ಕಾರ ನಿರ್ಬಂಧ ರದ್ದು ಮಾಡಬೇಕು ಎಂದು ಹೇಳಿದರು.
Key words: Traffic- restriction – persons- High Court- notice – Central – State Govt.