ಮೈಸೂರು,ಜೂ,3,2020(www.justkannada.in): ಮೈಸೂರಿಗೆ ಮುಂಬೈಗಿಂತ ಕೇರಳ, ತಮಿಳುನಾಡು ಸಂಪರ್ಕ ಹೆಚ್ಚು. ಮುಂಬೈನಿಂದ ವಾಪಸ್ಸಾಗಲು ಕೋರಿ 400 ಜನರು ಮಾತ್ರ ನೋಂದಣಿ ಮಾಡಿಸಿದ್ದರು. ಈ ಪೈಕಿ 200 ಜನ ಬಂದಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭೀರಾಂ ಜೀ ಶಂಕರ್ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ಅಭೀರಾಂ ಜೀ ಶಂಕರ್, ಮುಂಬೈನಿಂದ ಹೆಚ್ಚಿನ ಜನ ನಮ್ಮಲ್ಲಿಗೆ ಬಂದಿಲ್ಲ. ಆದರೆ ಒಟ್ಟಾರೆ 2000ಕ್ಕೂ ಹೆಚ್ಚು ಅಂತಾರಾಜ್ಯದವರು ವಾಪಸ್ಸಾಗಿದ್ದಾರೆ. ಈ ಪೈಕಿ ತಮಿಳುನಾಡು, ಕೇರಳದವರೇ ಹೆಚ್ಚಾಗಿದ್ದಾರೆ. ಮೈಸೂರಿನಲ್ಲಿ ದಿನಕ್ಕೆ 400-500 ಸ್ಯಾಂಪಲ್ ಟೆಸ್ಟ್ ನಡೆಯುತ್ತಿದೆ. ನಮ್ಮಲ್ಲಿ ಲ್ಯಾಬ್ ರಿಪೋರ್ಟ್ ಬರಬೇಕಾದ ಸಂಖ್ಯೆ ತೀರಾ ಕಡಿಮೆ ಎಂದು ಹೇಳಿದರು.
ಹಾಗೆಯೇ ಮೈಸೂರಿನಲ್ಲಿ ಪಾಸಿಟಿವ್ ಗಣನೀಯವಾಗಿ ಏರಿಕೆ ಕಾಣುವ ಲಕ್ಷಣ ಇಲ್ಲ. ಶೀತ ಮತ್ತು ನೆಗಡಿ ಇರುವವರು ಗಂಟಲು ದ್ರವ ಟೆಸ್ಟ್ ಮಾಡಿಸಿಕೊಳ್ಳಿ. ಉಚಿತವಾಗಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಿ. 200 ಮಂದಿ ಮೈಸೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಿಸಿ ಅಭೀರಾಂ ಜೀ ಶಂಕರ್ ತಿಳಿಸಿದರು.
ರಾಜ್ಯದಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತರು ಮುಂಬೈನಿಂದ ಬಂದವರೇ ಆಗಿದ್ದು ಹೀಗಾಗಿ ರಾಜ್ಯದಲ್ಲಿ ಮುಂಬೈ ನ ಆತಂಕ ಹೆಚ್ಚಾಗಿದೆ.
Key words: returned – Mysore – Mumbai- DC Abhiram Jee Shankar