ಮೈಸೂರು,ಜೂ,4,2020(www.justkannada.in): 1 ರಿಂದ 6ನೇ ತರಗತಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣವನ್ನ ಕಡ್ಡಾಯವಾಗಿ ರದ್ಧುಗೊಳಿಸಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಕಾಂಗ್ರೆಸ್ ವಕ್ತಾರ ಹೆಚ್.ಎ ವೆಂಕಟೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಪತ್ರ ಬರೆದಿರುವ ಕಾಂಗ್ರೆಸ್ ವಕ್ತಾರ ಹೆಚ್.ಎ ವೆಂಕಟೇಶ್, 1ರಿಂದ 6 ನೇ ತರಗತಿಯ ಮಕ್ಕಳಿಗೆ ಆನ್ ಲೈನ್ ತರಗತಿಯ ಬೋಧನೆಯನ್ನ ಕಡ್ಡಾಯವಾಗಿ ರದ್ಧುಗೊಳಿಸಲು ಒತ್ತಾಯಿಸುತ್ತೇನೆ. ಕೋವಿಡ್ 19ರ ಕಾರಣ ಮುಂದಿಟ್ಟು ಕೆಲವು ವಿದ್ಯಾಸಂಸ್ಥೆಗಳು 1ರಿಂದ 6ನೇ ತರಗತಿಗೆ ಆನ್ ಲೈನ್ ಶಿಕ್ಷಣ ನೀಡುತ್ತಿರುವುದು ಅತ್ಯಂತ ಸೂಚನೀಯ ಸಂಗತಿ. ಈ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನಡೆಸದಂತೆ ಕಡ್ಡಾಯವಾಗಿ ಕಾನೂನು ಜಾರಿಗೆ ತರಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಆನ್ ಲೈನ್ ಶಿಕ್ಷಣದಿಂದಾಗಿ ಹೃದಯ ವೈಶಲ್ಯತೆ ಮತ್ತು ಮಾನವೀಯ ಮನೋಭಾವಗಳು ಕುಂಠಿತವಾಗಿ ವಿದ್ಯಾರ್ಥಿಗಳಿಗೆ ಸಂವಹನ ಕೊರತೆ ಉಂಟಾಗುತ್ತದೆ. ಆನ್ ಲೈನ್ ಶಿಕ್ಷಣದಿಂದ ಆಟೋಟ ಪಾಠಗಳು ಇರುವುದಿಲ್ಲ. ಆನ್ ಲೈನ್ ಶಿಕ್ಷಣ ರದ್ಧುಗೊಳಿಸುವುದು ಮಕ್ಕಳು ಮತ್ತು ಸಮಾಜದ ಹಿತದೃಷ್ಠಿಯಿಂದ ಅನಿವಾರ್ಯವಾಗಿದೆ ಎಂದು ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.
ಹಾಗೆಯೇ ಆನ್ ಲೈನ್ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ಧುಗೊಳಿಸಬೇಕು. ಆನ್ ಲೈನ್ ಶಿಕ್ಷಣ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದರಿಂದ ತಾವು ಈ ಕೂಡಲೇ ಮಧ್ಯಪ್ರವೇಶಿಸುವುದು ಅತಿ ಜರೂರಿನ ಕೆಲಸವಾಗಿದೆ ಎಂಬುದನ್ನ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ ಎಂದು ಪತ್ರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.
Key words: Abolish -online -education -compulsory – mysore-Congress spokesperson -HA Venkatesh