ಈಗ ಪೂರ್ವ ಸಿದ್ದತೆ ಮಾಡಿಕೊಳ್ಳಲಿ, ಆದರೆ ಕನಿಷ್ಟ ಮೂರು ತಿಂಗಳು ಶಾಲೆ ತೆರೆಯ ಬೇಡಿ : ಮಾಜಿ ಸಿಎಂ ಸಿದ್ದರಾಮಯ್ಯ.

 

ಮೈಸೂರು, ಜೂ.05, 2020 : (www.justkannada.in news) ಕೋವಿಡ್ 19 ಭೀತಿ ಹೆಚ್ಚಾಗುತ್ತಿದೆ. ಆದರೂ ಶಾಲಾ ಕಾಲೇಜು ಆರಂಭಕ್ಕೆ ನಿರ್ಧಾರ ಮಾಡಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಆತುರದ ತೀರ್ಮಾನಕ್ಕೆ ಬರ ಬಾರದು. ಕನಿಷ್ಟ ಮೂರು ತಿಂಗಳು ಶಾಲೆ ತೆರೆಯಬಾರದೆಂದು ಸರ್ಕಾರಕ್ಕೆ ನನ್ನ ಸಲಹೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ನಿವಾಸಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಿಷ್ಟು..

ಮುಂದಿನ ದಿನಗಳಲ್ಲಿ ಎರಡು ಶಿಫ್ಟ್ ಮಾಡಿ ಶಾಲೆ ಪ್ರಾರಂಭ ಮಾಡಬೇಕು. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ಶಾಲೆ ನಡೆಸಬೇಕು. ಕೊವಿಡ್-19 ಉಪಟಳ ಮಕ್ಕಳಿಗೆ ತಗುಲಿದರೆ ತೊಂದರೆ ಆಗುತ್ತೆ. ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಶಾಲಾ ಪ್ರಾರಂಭಿಸಿ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೂ ನಾನು ಸೂಚಿಸಿದ್ದೇನೆ. ಮೈಸೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ

karnataka-former-CM-siddaramaiha-press.meet-mysore

ಎಲ್ಲ ರೀತಿಯ ಶಾಲೆಗಳಿಗು ಇದು ಅನ್ವಯ ಆಗಬೇಕು. ಕೊರೋನಾಗೆ ಯಾವುದೇ ವಾಕ್ಸಿನೇಷನ್ ಇಲ್ಲ. ಇದಕ್ಕೆ ಮಾಸ್ಕ್ ಹಾಕೋಳೋದು, ಸ್ಯಾನಿಟೈಸ್ ಮಾಡಿಕೊಳ್ಳೊದೆ ಮದ್ದು. ಇದಕ್ಕೆ ಔಷಧ ಕಂಡು ಹಿಡಿಯೋವರೆಗು ಇದೆ ಮದ್ದು.

ಫ್ರಾನ್ಸ್‌ನಲ್ಲಿ ಇದೇ ರೀತಿ ಶಾಲೆ ತೆರೆದು ಮಕ್ಕಳಿಗೆ ಕೊರೋನಾ ಬಂದಿದೆ. ಇದನ್ನ‌ ನಾನು ಕೂಡ ನ್ಯೂಸ್ ‌ನಲ್ಲಿ ನೋಡಿದ್ದೇನೆ. ಹಾಗಾಗಿ ಸರ್ಕಾರ ಶಾಲೆ ತೆರೆಯಲು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು. ಆದರೆ ಶಾಲೆಯನ್ನ ಈಗ ಆರಂಭಿಸಬಾರದು. ಶಾಲೆ ತೆರೆಯುವ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ.

karnataka-former-CM-siddaramaiha-press.meet-mysore

ನಾನು ಸಿಎಂ ಆಗಿದ್ರೆ ಕುಟುಂಬಕ್ಕೆ 10 ಸಾವಿರ ನೀಡ್ತಿದೆ. ಬರೋಬ್ಬರಿ 1 ಕೋಟಿ ಕುಟುಂಬಕ್ಕೆ 10ಸಾವಿರ ರೂ. ಕೊಡ್ತಿದೆ. ಇದನ್ನ ಯಡಿಯೂರಪ್ಪನವರಿಗೆ ಹೇಳ್ತಾ ಇದ್ದೀನಿ. ಸಾಲ ತೆಗೆದುಕೊಂಡು ಒಂದು ಕೋಟಿ ಕುಟುಂಬಗಳಿಗೆ ಸಾಲ ಕೊಡ್ತಿದೆ. ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಖರ್ಗೆ ಸ್ಪರ್ದೆ ವಿಚಾರ. ನನ್ನ ಶಿಫಾರಸ್ಸು ಖರ್ಗೆ ಅಂತ ಈಗಾಗಲೇ ಹೇಳಿದ್ದೀನಿ. ವೇಣುಗೋಪಾಲ್ ಅವರಿಗೆ ಈ ಬಗ್ಗೆ ಹೇಳಿದ್ದೇನೆ. ಕೊಪ್ಪಳದಲ್ಲಿ ನಾನು ಆಸಕ್ತಿ ಇದ್ದರೆ ಖರ್ಗೆ ಹೆಸರು ಶಿಫಾರಸ್ಸು ಮಾಡ್ತಿವಿ ಎಂದಿದ್ದೆ. ಅದಕ್ಕೆ ಖರ್ಗೆ ಅವರು ನನಗೆ ಆಸಕ್ತಿ ಇದೆ ಎಂದಿದ್ದಾರೆ. ನಗುತ್ತಲೇ ಖರ್ಗೆ ಹೆಸರು ಸೂಚಿಸಿರುವುದಾಗಿ ಹೇಳಿದ ಸಿದ್ದರಾಮಯ್ಯ. ಏನು ಹೇಳಬೇಕೋ‌ ಎಲ್ಲವು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

oooo

key words : karnataka-former-CM-siddaramaiha-press.meet-mysore