ಮೈಸೂರು,ಜೂ,6,2020(www.justkannada.in): ಜೂ.8 ದೇವಾಲಯಗಳು ಪುನರಾರಂಭ ವಿಚಾರ ಸಂಬಂಧ, ಸೋಮವಾರದಿಂದ ಸುತ್ತೂರಿನಲ್ಲೂ ಮಠವನ್ನು ತೆರೆಯಲಾಗುತ್ತದೆ. ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗುವುದು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸುತ್ತೂರು ಶ್ರೀಗಳು, ಜೂ.8ರಿಂದ ಸುತ್ತೂರು ಮಠ ತೆರೆಯಲಾಗುತ್ತದೆ. ಪ್ರಸಾದವನ್ನು ಪಟ್ಟಣಗಳ ಮುಖಾಂತರ ವಿತರಿಸಲಾಗುವುದು. ಆದರೆ ಮಠದಲ್ಲಿ ವಾಸ್ತವ್ಯಕ್ಕೆ ಅವಕಾಶವಿಲ್ಲ. ಸರ್ಕಾರ ರೂಪಿಸಿರುವ ನಿಯಮಗಳಿಗೆ ಅನುಸಾರವಾಗಿ ಕ್ರಮಕೈಗೊಳ್ಳಲಾಗುವುದು. ಲಾಕ್ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹಗಳನ್ನು ಕೂಡಾ ನಡೆಸಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಶಾಲೆಗಳನ್ನ ಪುನರಾರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುತ್ತೂರು ಶ್ರೀಗಳು, ಶಾಲೆ ಕಾಲೇಜುಗಳ ಆರಂಭದ ವಿಚಾರದಲ್ಲಿ ಮಕ್ಕಳ ಹಾಗೂ ಪೋಷಕರ ಹಿತದೃಷ್ಠಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಶಾಲೆಗಳು ಅರಂಭ ಅದ್ರೆ ಸಾಮಾಜಿಕ ಅಂತರ ಸೇರಿದಂತೆ ಮುನ್ನೆಚ್ಚರಿಕೆ ಆಗತ್ಯ. ಶಾಲೆಗಳಲ್ಲಿ ಪಠ್ಯ ಕ್ರಮಗಳನ್ನು ಸಂಕ್ಷಿಪ್ತ ಗೊಳಿಸಬೇಕು. ಪಠ್ಯಕ್ರಮ ಸಂಕ್ಷಿಪ್ತ ಗೊಳಿಸಿದ್ರೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಹೊರೆ ಕಮ್ಮಿಯಾಗುತ್ತೆ. ವಿದ್ಯಾರ್ಥಿಗಳಿಗೆ ಪಾಳಿ ಪ್ರಕಾರ ತರಗತಿಗಳನ್ನು ಪ್ರಾರಂಭ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ನಮ್ಮ ಸಲಹೆ ನೀಡಿದ್ದೇವೆ ಎಂದು ಸುತ್ತೂರು ಶ್ರೀಗಳು ತಿಳಿಸಿದರು.
ಸಚಿವ ಸುರೇಶ್ ಕುಮಾರ್ ಕೂಡ ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಉತ್ತಮ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದು ಸೂತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
Key words: mysore-suttur Math – open- 8th June-Sri Shivaratri Desi Kendra Sri