ಮುಂಬೈ , ಜೂನ್ 12, 2020 (www.justkannada.in): ಪ್ರಿಯಾಂಕಾ ಮತ್ತೆ ನೆಟ್ಟಿಗರು ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಅಂದಹಾಗೆ ಈ ಬಾರಿಯೂ ಪ್ರಿಯಾಂಕಾ ಹೆಚ್ಚು ಟ್ರೋಲ್ ಆಗಿರುವುದು ಡ್ರೆಸ್ ವಿಚಾರಕ್ಕೆ. ತರಹೇವಾರಿ ಡ್ರೆಸ್ ಗಳನ್ನು ಧರಿಸುವ ಪ್ರಿಯಾಂಕಾ ಪದೇ ಪದೇ ಟ್ರೋಲ್ ಆಗುತ್ತಿರುತ್ತಾರೆ. ಈಗ ಮತ್ತೆ ಪ್ರಿಯಾಂಕಾ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
ಪ್ರಿಯಾಂಕಾ ಧರಿಸಿರುವ ಬಟ್ಟೆಗಳನ್ನು ಕಸದಬುಟ್ಟಿಗೆ ಹೋಲಿಸಿ ಟ್ರೋಲ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪ್ರತಿಯೊಂದು ಡ್ರೆಸ್ ಬಣ್ಣಕ್ಕೂ ಕಸದಬುಟ್ಟಿಯ ಬಣ್ಣವನ್ನು ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ.