ಬೆಂಗಳೂರು, ಜೂನ್ 13, 2020 (www.justkannada.in): ಸೆಂಚುರಿ ಸ್ಟಾರ್ ಡಾ. ಶಿವರಾಜ್ಕುಮಾರ್ ಮತ್ತು ನಟಸಿಂಹ ನಂದಮೂರಿ ಬಾಲಕೃಷ್ಣ. ಇದೀಗ ಈ ಇಬ್ಬರು ನಟರು ತೆರೆ ಮೇಲೆ ಕಾಣಿಸಿಕೊಳ್ಳುವ ಕಾಲ ಬಂದಿದೆ.
ಮತ್ತೆ ಬಾಲಯ್ಯ ಜೊತೆ ನಟಿಸುವ ಇಂಗಿತವನ್ನು ಶಿವಣ್ಣ ವ್ಯಕ್ತಪಡಿಸಿದ್ದಾರೆ. ಬಾಲಯ್ಯನ 60 ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಶಿವಣ್ಣ ಒಟ್ಟಿಗೆ ಸಿನಿಮಾ ಮಾಡೋ ಆಸೆಯನ್ನ ತೋಡಿಕೊಂಡಿದ್ದಾರೆ.
ಶಿವರಾಜ್ಕುಮಾರ್ ಮತ್ತು ಬಾಲಕೃಷ್ಣ ಸೋದರರಂತೆ ಇದ್ದಾರೆ. ಇದೇ ಬಾಂಧವ್ಯದಿಂದ ತೆಲುಗಿನ ಐತಿಹಾಸಿಕ ಗೌತಮಿಪುತ್ರ ಶಾತಕರ್ಣಿ ಸಿನಿಮಾದ ಹಾಡೊಂದಕ್ಕೆ ಶಿವಣ್ಣ ಹೆಜ್ಜೆ ಹಾಕಿದರು.
100ನೇ ಸಿನಿಮಾದಲ್ಲಿ ನಟಿಸಿದ್ದೆ, 200ನೇ ಸಿನಿಮಾದಲ್ಲೂ ನಟಿಸಬೇಕು. ಸಣ್ಣ ಪಾತ್ರವಾದ್ರು, ಸರಿ ದೊಡ್ಡ ಪಾತ್ರವಾದ್ರು ಸರಿ ಅಂತ ಹೇಳಿದ್ಧಾರೆ.