‘ಭಾರತೀಯ ಮಾಧ್ಯಮ- ಉದ್ಯಮದ ಭವಿಷ್ಯ’ : ಒಂದು ವಾರದ ವೆಬ್‌ನಾರ್‌ ಆಯೋಜಿದ ಬೆಂಗಳೂರು ವಿವಿ

 

ಬೆಂಗಳೂರು, ಜೂ.14, 2020 : ಬೆಂಗಳುರು ವಿಶ್ವವಿದ್ಯಾನಿಲಯದ ಪತ್ರಿಕೋಧ್ಯಮ ವಿಭಾಗದ ವತಿಯಿಂದ ವಿದ್ಯಾರ್ಥಿಗಳು, ಮಾಧ್ಯಮ ಶಿಕ್ಷಣತಜ್ಞರು ಮತ್ತು ಸಂಶೋಧಕರ ವೃತ್ತಿಪರ ಅಭಿವೃದ್ಧಿಗಾಗಿ ಒಂದು ವಾರದ ವೆಬ್‌ನಾರ್‌ ಆಯೋಜಿಸಲಾಗಿದೆ.

ಜೂನ್ 22 ರಿಂದ 27 ರವರೆಗೆ ಈ ವೆಬ್ ನಾರ್ ನಡೆಯಲಿದೆ. ಈ ವೆಬ್‌ನಾರ್ , ಭವಿಷ್ಯದ ಮತ್ತು ಮಾಧ್ಯಮಗಳ ಟ್ರೆಂಡ್‌ಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಒಳಗೊಂಡಿದೆ. ಜತೆಗೆ ಪತ್ರಿಕೆ, ಟೆಲಿವಿಷನ್, ಮನರಂಜನಾ ಉದ್ಯಮ ಮತ್ತು ನಿಯತಕಾಲಿಕೆಗೆ ಸಂಬಂಧಿಸಿದ ವಿಷಯಗಳನ್ನು ಸಹ ಒಳಗೊಂಡಿದೆ.

ಈ ಸಂವಾದಾತ್ಮಕ ಅಧಿವೇಶನಗಳು ಕ್ಷೇತ್ರದಲ್ಲಿ ಕೆಲಸ ಮಾಡುವ ಮತ್ತು ಮಾಧ್ಯಮವನ್ನು ಅಧ್ಯಯನ ಮಾಡುವವರ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸುವ ಒಂದು ಹೆಜ್ಜೆಯಾಗಿದೆ ಎಂದು ಬೆಂಗಳೂರು ವಿವಿ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ.ರವಿ ತಿಳಿಸಿದ್ದಾರೆ.
ವೆಬ್ ನಾರ್ ನ ಶೀರ್ಷಿಕೆ, ‘ಭಾರತೀಯ ಮಾಧ್ಯಮ- ಉದ್ಯಮದ ಭವಿಷ್ಯ’

Week-long Webinar, Title: 'The Future of Indian Media Industry'- Department of Communication- Bangalore University.

Registration Form ; https://forms.gle/5RhPsQWtjfu6qdf57

Whatsapp Group : https://chat.whatsapp.com/BcTIKej5Qcv7uIDY5diw4D

 

oooo

key words :  Week-long Webinar, Title: ‘The Future of Indian Media Industry’- Department of Communication- Bangalore University.