ಮೈಸೂರು,ಜೂ,16,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಅನುಮಾನಸ್ಪದವಾಗಿ ಬ್ಯಾಗ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಠಿಸಿತ್ತು. ಆ ಬ್ಯಾಗ್ ಒಳಗೆ ಬಟ್ಟೆ ಇರುವುದು ಇದೀಗ ಕಂಡು ಬಂದಿದೆ.
ಸಯ್ಯಾಜೀ ರಾವ್ ರಸ್ತೆಯಲ್ಲಿ ಅನುಮಾನಸ್ಪದವಾಗಿ ಬ್ಯಾಗ್ ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ವೇಳೆ ಬ್ಯಾಗ್ ಒಳಗೆ ಬಟ್ಟೆ ಇರುವುದು ಕಂಡುಬಂದಿದ್ದು ಇದರಿಂದಾಗಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಬ್ಯಾಗ್ ಯಾರದ್ದು ಎಂಬುದನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೌದು, ಸೆಂದಿಲ್ ಕುಮಾರ್ ಟೆಕ್ಸ್ ಟೈಲ್ಸ್ ಮುಂಭಾಗ ಬಂದಿದ್ದ ಗ್ರಾಹಕನೋರ್ವ ಬಟ್ಟೆ ಬ್ಯಾಗ್ ಬಿಟ್ಟು ಹೋಗಿ ಯಡವಟ್ಟು ಮಾಡಿದ್ದನು. ಈ ವೇಳೆ ಬ್ಯಾಗ್ ಕಂಡು ಸಾಕಷ್ಟು ಆತಂಕ ಸೃಷ್ಠಿಯಾಗಿತ್ತು.
ಇದೀಗ ಪೊಲೀಸರು ಗ್ರಾಹಕನನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ಬ್ಯಾಗ್ ಕೊಟ್ಟಿದ್ದಾರೆ. ಹಾಗೆಯೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
Key words: Mysore-bag – anxiety – discovered-police