ವಾಷಿಂಗ್ಟನ್ , ಜೂನ್ 17, 2020 (www.justkannada.in): ಈ ಬಾರಿ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಶಿಪ್ ನಡೆಯಲಿದೆ ಎಂಬ ಅಧಿಕೃತ ಮಾಹಿತಿಯೇ ಲಭ್ಯವಾಗಿದೆ.
ಆಗಸ್ಟ್ 31ಕ್ಕೆ ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿತ್ತು. ಇದೀಗ ಇದೇ ವೇಳಾಪಟ್ಟಿ ಪ್ರಕಾರ ಟೆನಿಸ್ ಚಾಂಪಿಯನ್ಶಿಪ್ ನಡೆಯಲಿದೆ ಅಂತಾ ನ್ಯೂಯಾರ್ಕ್ ಗವರ್ನರ್ ಆಯಂಡ್ಯೂ ಕ್ಯುಮೋ ಹೇಳಿದ್ದಾರೆ.
ಕೊರೊನಾ ಹಾವಳಿಯಿಂದ ಖಾಲಿ ಕೋರ್ಟ್ನಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಈ ಬಾರಿ ಪ್ರೇಕ್ಷಕರಿಲ್ಲದೇ ಟೆನಿಸ್ ಓಪನ್ ಚಾಂಪಿಯನ್ಶಿಪ್ ನಡೆಯಲಿದೆ. USTA ಆಟಗಾರರ ಆರೋಗ್ಯದ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿದೆ.