ಬೆಂಗಳೂರು, ಜೂನ್ 17, 2020 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೆಪ್ಟೆಂಬರ್ ನಿಂದ ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ.
ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಸಲು ಬಿಸಿಸಿಐ ಚಿಂತಿಸಿದ್ದು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಅಧಿಕೃತ ಆದೇಶವೊಂದೇ ಬಾಕಿ ಇದೆ.
44 ದಿನಗಳ ಟೂರ್ನಿಯಲ್ಲಿ ಒಟ್ಟಾರೆ 60 ಪಂದ್ಯ ನಡೆಯಲಿದೆ. ಈ ಬಾರಿ ತವರಿನ ಪಂದ್ಯಗಳು ಇರುವುದಿಲ್ಲ. ಬದಲಿಗೆ ಒಟ್ಟಾರೆ 5 ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
ಕಳೆದ ಕೆಲವು ದಿನಗಳಿಂದ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳು, ಮಾಧ್ಯಮ ಹಕ್ಕುಗಳ ಪಾಲುದಾರ(ಸ್ಟಾರ್ ಇಂಡಿಯಾ) ಮತ್ತು ಐಪಿಎಲ್ನ ಇತರ ಪಾಲುದಾರರೊಂದಿಗೆ ಸಮಾಲೋಚಿಸಿದೆ ಮತ್ತು ಐಪಿಎಲ್ ಅನ್ನು ಸೆಪ್ಟೆಂಬರ್ 26 ರಿಂದ ನವೆಂಬರ್ 8 ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.